ಬಳಂಜದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

0

ಬಳಂಜ: ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳಂಜದಲ್ಲಿ ನಡೆಯಲಿದೆ.

ಅ. 5 ರಂದು ವಿಧಾನಪರಿಷತ್ ಶಾಸಕರಾದ  ಪ್ರತಾಪ್ ಸಿಂಹ ನಾಯಕ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಅ.11 ರಂದು ಶಿಬಿರವು ಸಮಾರೋಪಗೊಳ್ಳಲಿದೆ. ಬೆಳ್ತಂಗಡಿ ತಾಲೂಕಿನ ಶಾಸಕರಾದ  ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ” ವಿದ್ಯಾರ್ಥಿ ಯುವಜನರ ದೃಷ್ಟಿ, ಗ್ರಾಮ ಭಾರತದಲ್ಲಿ ಸರ್ವೋದಯ ಸೃಷ್ಟಿ”ಎಂಬ ಶೀರ್ಷಿಕೆಯಡಿ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಶ್ರಮದಾನ, ಸಾಮಾಜಿಕ ಕಳಕಳಿ ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಂಕರ್ ರಾವ್ ಮತ್ತು ಕಾಮಾಕ್ಷಿ ಶಿಬಿರಾಧಿಕಾರಿ ಗಳಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here