ಆ.8: ಪಣಕಜೆಯಲ್ಲಿ ಮೈಕ್ರೋಬಿ ಆಗ್ರೋಟೆಕ್ ಡಾ. ಸಾಯಿಲ್ ಕುರಿತು ಕೃಷಿ ಮಾಹಿತಿ , ಪತ್ರಿಕಾ ಗೋಷ್ಠಿ

0


ಬೆಳ್ತಂಗಡಿ : ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಇದರ ಸಹಕಾರದಲ್ಲಿ ಅ.8 ರಂದು ಪಣಕಜೆ ಆರ್ತಿಲ ವಿಲ್ಸನ್ ಗೊನ್ಸಾಲ್ವಿಸ್ ರವರ ಮನೆಯಲ್ಲಿ ಮೈಕ್ರೋಬಿ ಅಗ್ರೋಟೆಕ್ ನವರ ಡಾ. ಸಾಯಿಲ್ ಸಾವಯವ ಕೃಷಿ ಕುರಿತು ನುರಿತ ತಜ್ಞರಿಂದ ನೇರ ಸಂವಾದ, ಉಚಿತ ಕೃಷಿ ಮಾಹಿತಿ,ಪ್ರಾತ್ಯಕ್ಷತೆ ನಡೆಯಲಿದೆ ಎಂದು ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಲ್ಯಾನ್ಸಿ ಎ. ಪೀರೇರಾ ಹೇಳಿದರು.

ಅವರು ಸೆ.29 ರಂದು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಡಾ. ಸಾಯಿಲ್  ರೈತ ಬಂಧು ಸಾವಯವ ಗೊಬ್ಬರವಾಗಿದ್ದು ಇದರಿಂದ ಮಣ್ಣಿನ ಫಲವತ್ತತೆ, ಪ್ರಯೋಜನ, ಉಪಯೋಗಿಸುವ ಕ್ರಮದ ಬಗ್ಗೆ ಅಂದು ಕೃಷಿ ತಜ್ಞ ಡಾ. ಶ್ರೀಕಾಂತ್ ಮತ್ತು ತಂಡದವರಿಂದ ಮಾಹಿತಿ ಕೃಷಿಕರಿಗೆ ಹಾಗೂ ಪ್ರಾತ್ಯಕ್ಷ ನಡೆಯಲಿದೆ ಎಂದರು .

ಪತ್ರಿಕಾ ಗೋಷ್ಠಿಯಲ್ಲಿ ಪ್ರೇರಣಾ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್, ನಿರ್ದೇಶಕರುಗಳಾದ ಜಾನ್ ಅರ್ವಿನ್ ಡಿಸೋಜ, ಜಾನ್ ಅಲ್ವಿನ್ ಪಿಂಟೊ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐರಿನ್ ಡಿಸೋಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here