ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ(ರಿ) ಕಾರ್ಕಳ ಸಾಮಾನ್ಯ ಸಭೆ ಶೇಕಡಾ 12 ಲಾಭಾಂಶ ಘೋಷಣೆ

0

ಕಾರ್ಕಳ: ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕಾರ್ಕಳ ಇದರ 2021-2022ನೇ ಸಾಲಿನ ಸಾಮಾನ್ಯ ಸಭೆಯು ಸೆ.24 ರಂದು ಕಾರ್ಕಳ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ  ನೇಮಿರಾಜ ಆರಿಗ ಮಾತನಾಡುತ್ತ ಸಂಘವು ಸ್ಥಾಪನೆಗೊಂಡು 16 ವರ್ಷಗಳನ್ನು ಪೂರೈಸಿ ವ್ಯವಹಾರದಲ್ಲಿ ಯಶಸ್ಸನ್ನು ಕಂಡಿದೆ. ಬೆಳ್ತಂಗಡಿ , ಉಜಿರೆ,  ಬಳಂಜದಲ್ಲಿ ಮೂರು ಶಾಖೆಗಳನ್ನು ತೆರೆದಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಘದ ಅಭಿವೃದ್ಧಿಗೆ ಕಾರಣಿ ಕರ್ತೃ ಗಳಾದ ಗ್ರಾಹಕರಿಗೆ ಕೃತಜ್ಞತೆ ಗಳನ್ನು ಸಲ್ಲಿಸುತ್ತಿದ್ದೇನೆ ಎಂದರು ಹಾಗೂ ಶೇರುದಾರರಿಗೆ ಶೇಕಡಾ 12 ಲಾಭಾಂಶ ಘೋಷಣೆ ಮಾಡಿದರು.

ಸಿಬ್ಬಂದಿ ಗಳ ಪ್ರಾರ್ಥನೆ ಯೊಂದಿಗೆ ಆರಂಭ ಗೊಂಡ ಸಭೆಯಲ್ಲಿ ಸಹಕಾರಿಯ ನಿರ್ದೇಶಕರಾದ  ಪ್ರವೀಣ್ ಭಟ್ ರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ನಿರ್ದೇಶಕರಾದ  ಭವ್ಯ ಸಾಮಾನ್ಯ ಸಭೆಯ ನೋಟಿಸನ್ನು ವಾಚಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ  ಶಶಿಕಿರಣ್ ಜೈನ್ ವಾರ್ಷಿಕ ವರದಿ ಮಂಡಿಸಿದರು . ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿಶು ಕುಮಾರ್ ಜೈನ್ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು .ನಿರ್ದೇಶಕರಾದ ಎಸ್ ಪಾರ್ಶ್ವನಾಥ ವರ್ಮ 2022-23ನೇ ಸಾಲಿನ ಅಂದಾಜು ಆಯ ವ್ಯಯ ಪಟ್ಟಿಯನ್ನು ಮಂಡಿಸಿದರು. ನಿರ್ದೇಶಕರಾದ  ಶಮಂತ್ ಕುಮಾರ್ ಜೈನ್ ಕೊನೆಯಲ್ಲಿ ವಂದಿಸಿದರು.
ಸಹಕಾರಿಯ ಸಿಬ್ಬಂದಿಗಳ ಸಹಕಾರದೊಂದಿಗೆ ಸಭೆ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here