ಲಾಯಿಲ ಭಗತ್ ಸಿಂಗ್ ವೃತ್ತದಲ್ಲಿ ವೀರ ಭಗತ್ ಸಿಂಗ್ ಇವರ 115 ನೇ ಜನುಮ ದಿನಾಚರಣೆ

0

ಲಾಯಿಲ:  ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 115 ನೇ ಜನುಮ ದಿನಾಚರಣೆಯನ್ನು ಲಾಯಿಲ “ಭಗತ್ ಸಿಂಗ್” ವೃತ್ತದಲ್ಲಿ ಆಚರಿಸಲಾಯಿತು.

ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರನ್ನು ಸ್ಮರಿಸಲಾಯಿತು. ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಕುಂಬಾರ ಇವರು ಭಗತ್ ಸಿಂಗ್ ಇವರ ಜೀವನ ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಇವರು ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ್ ಇವರು ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಪುರುಷೋತ್ತಮ್ ಶೆಣೈ, ಪಂಚಾಯತ್ ಸದಸ್ಯರಾದ ಹರಿಕೃಷ್ಣ ಪುತ್ರಬೈಲ್, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾಶಿ ಬೆಟ್ಟು, ಮಾಜಿ ಅಧ್ಯಕ್ಷರಾದ ಸುಜೀತ್ ಗುರಿಂಗಾನ, ಮತ್ತು ಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು, ಲಾಯಿಲ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂದಳ ಘಟಕದ ಕಾರ್ಯಕರ್ತ ಬಂಧುಗಳು ಮತ್ತು ಊರಿನ ನಾಗರಿಕರು ಭಾಗವಹಿಸಿದರು.

ಲಾಯಿಲ ಹಾಸನ ಐಯಂಗರ್ ಬೇಕರಿ ಮಾಲಕರಾದ ರಘು ಇವರು ಎಲ್ಲರಿಗೂ  ಸಿಹಿ ತಿಂಡಿಯನ್ನು ವಿತರಿಸಿದರು.

LEAVE A REPLY

Please enter your comment!
Please enter your name here