ರೋಟರಿ ಕ್ಲಬ್ ವತಿಯಿಂದ ನವರಾತ್ರಿ ಹಬ್ಬ ಆಚರಣೆ

0

ಬೆಳ್ತಂಗಡಿ :  ರೋಟರಿ ಕ್ಲಬ್, ಬೆಳ್ತಂಗಡಿಯ ವತಿಯಿಂದ ನವರಾತ್ರಿ ಹಬ್ಬವನ್ನು ಸೆ.29 ರಂದು ಕಾಶಿಬೆಟ್ಟು ಅರಳಿ ರೋಟರಿ ಭವನದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್, ಆ್ಯನ್ಸ್ ಕ್ಲಬ್ ನ ಅಧ್ಯಕ್ಷೆ ಆ್ಯನ್ ಸುಜಾತಾ ಅಣ್ಣಿ ಪೂಜಾರಿ ಹಾಗೂ ಸದಸ್ಯರು ದೇವಿಯ ದೀಪವನ್ನು ಪ್ರಜ್ವಲನೆ ಮಾಡಿದರು.

ರೊ. ಉಮಾರಾವ್ ನವರಾತ್ರಿ ಉತ್ಸವದ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು. ಗದಗದ ಸುರೇಶ್ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು . ವಿಧಾನ ಪರಿಷತ್ ಸದಸ್ಯ ರೊ. ಪ್ರತಾಪಸಿಂಹ ನಾಯಕ್, ರೋಟರಿ ಜಿಲ್ಲೆ ವಲಯ 4 ರ ಸಹಾಯಕ ಗವರ್ನರ್ ನಿವೃತ್ತ ಮೇಜರ್ ಜನರಲ್ ಎಂ. ವಿ. ಭಟ್ ಹಾಗೂ ರೋಟರಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here