ಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣ: ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶ

0

ಬೆಳ್ತಂಗಡಿ:  ಚೆಕ್ ಬೌನ್ಸ್ ಪ್ರಕರಣದಲ್ಲಿ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿವಾಸಿಯೊಬ್ಬರ ವ್ಯವಹಾರ ಸಂಬಂಧ ಒಂದು ಕೋಟಿ ಹತ್ತು ಲಕ್ಷ  ಮೊತ್ತಕ್ಕೆ ನೀಡಿದ ಚೆಕ್ ಬ್ಯಾಂಕ್ ನಲ್ಲಿ ನೀಡಿದಾಗ ಬೌನ್ಸ್ ಆಗಿದ್ದು ನಂತರ ಇದರ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಗರದ ನಿವಾಸಿ ದೀಪಕ್ ಮೌರ್ಯ(33) ಒಂದು ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈ ಬಗ್ಗೆ ನ್ಯಾಯಾಲಯ ವಾರೆಮಟ್ ಜಾರಿ ಮಾಡಿ ಬಂಧಿಸಲು ಆದೇಶ ಹೊರಡಿಸಿತ್ತು. ಬೆಳ್ತಂಗಡಿ ಪೊಲೀಸರು ಹಲವು ಭಾರಿ ಆರೋಪಿಯ ಬಂಧನಕ್ಕೆ ಹೋದಾಗ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಈ ಭಾರಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಜೈಲು ಪಾಲಾಗಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಮತ್ತು ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅವರ ಸೂಚನೆಯಂತೆ ವಿಶೇಷ ಕರ್ತವ್ಯದಲ್ಲಿ ಎಎಸ್ ಐ ರಾಮಯ್ಯ ಹೆಗ್ಡೆ ಮತ್ತು ಹೆಡ್ ಕಾನ್ಸ್ ಟೇಬಲ್ ಗಂಗಾಧರ್ ಪೂಜಾರಿಯವರು ಮಂಗಳೂರಿನಿಂದ ವಿಮಾನದ ಮೂಲಕ ದೆಹಲಿ ಹೋಗಿ ಅಲ್ಲಿಂದ ಉತ್ತರ ಪ್ರದೇಶಕ್ಕೆ ತೆರಳಿ ಪ್ರಯಾಗ್ ರಾಜ್ ನಗರದ ಪೊಲೀಸ್ ಠಾಣೆಗೆ ಹೋಗಿ ಹಿರಿಯ ಪೊಲೀಸರ ಬಳಿ ಆರೋಪಿಯ ದಸ್ತಗಿರಿ ಮಾಡುವ ವಾರೆಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅವರದ್ದೇ ಪೊಲೀಸ್ ವಾಹನದಲ್ಲಿ ಶಸ್ತ್ರಾಸ್ತ್ರ ಜೊತೆ ಆರೋಪಿ ಮನೆಗೆ ದಾಳಿ ಮಾಡಿ ಆರೋಪಿ ದೀಪಕ್ ಮೌರ್ಯನನ್ನು ವಶಕ್ಕೆ ಪಡೆದು ಭದ್ರತೆಯಲ್ಲಿ ಉತ್ತರ ಪ್ರದೇಶ ವಿಮಾನ ನಿಲ್ದಾಣದವರೆಗೆ ಪ್ರಯಾಗ್ ರಾಜ್ ನಗರ ಪೊಲೀಸರು ತಲುಪಿಸಿ ಅಲ್ಲಿಂದ ದೆಹಲಿ ಮೂಲಕ ವಿಮಾನದಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ಬೆಳ್ತಂಗಡಿ ಠಾಣೆಗೆ ಕರೆತಂದು ಕೋರ್ಟ್ ಗೆ ಆರೋಪಿಯನ್ನು ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here