ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಚಂಡಿಕಾ ಯಾಗ ಮತ್ತು ಗಣಪತಿ ಹವನ

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ  ಬ್ರಹ್ಮಶ್ರೀ ವೇದಮೂರ್ತಿ  ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ನವರಾತ್ರಿಯ 5 ನೇ ದಿನವಾದ ಇಂದು (ಸೆ.30) ದೇವಳದಲ್ಲಿ ಚಂಡಿಕಾ ಯಾಗ, ಗಣಪತಿ ಹವನವು   ನಡೆಯುತ್ತಿದೆ.

ಈ ಪ್ರಯುಕ್ತ ದೇವಸ್ಥಾನದ ಭಕ್ತಾದಿಗಳಿಗೆ ಅರಶಿನ ಕುಂಕುಮ, ಹೂ ವಿತರಣೆ  ಮತ್ತು ಭಜನಾ ಸೇವೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮತ್ತು ಸದಸ್ಯರು ಭಕ್ತಾದಿಗಳು,  ಅರ್ಚಕ ವೃಂದ ಉಪಸ್ಥಿತರಿದ್ದಾರೆ . ರಾತ್ರಿ ದುರ್ಗಾ ಪೂಜೆ ನೆರವೇರಲಿದೆ.

 

LEAVE A REPLY

Please enter your comment!
Please enter your name here