ಉಜಿರೆ ಕಾಶಿ ಪ್ಯಾಲೇಸ್ ನಲ್ಲಿ ದಿ ಓಷ್ಯನ್ ಪರ್ಲ್ ಶುಭಾರಂಭ

0

ಉಜಿರೆ: ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್  ಪರ್ಲ್, ಉಜಿರೆಯ ಕಾಶಿ ಪ್ಯಾಲೆಸ್ ನಲ್ಲಿ  ಸೆ.30ರಂದು ತನ್ನ 5ನೇ ಶಾಖೆ ಲೋಕಾರ್ಪಣೆಗೊಂಡಿತು.

ಉದ್ಘಾಟನೆಯನ್ನು ಮಾತೃಶ್ರೀ ಕಾಶಿ ಶೆಟ್ಟಿ ಉಪಸ್ಥಿತಿಯಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಬಾಕರ್ ಭಟ್,  ಬಿಜೆಪಿ  ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ,  ಉಜಿರೆ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ|ಎಂ ಮೋಹನ್ ಆಳ್ವ, ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಪ್ರೊ.ಎಸ್ ಪ್ರಭಾಕರ್,, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ,  ಪಟ್ಲ ಸತೀಶ್, ಉಜಿರೆ ಎಸ್ ಡಿಎಂ  ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ಯಶೋವರ್ಮ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಧರ್ಮಪತ್ನಿ ಡಾ| ಹೇಮಾವತಿ ಹೆಗ್ಗಡೆಯವರು ಮತ್ತು ಸೋನಿಯ ವರ್ಮ ಭಾಗಿಯಾಗಿದ್ದರು.

ಕಾಶಿ ಪ್ಯಾಲೆಸ್ ಮಾಲಕರು ಶಶಿಧರ್ ಶೆಟ್ಟಿ ಹಾಗೂ ಧರ್ಮಪತ್ನಿ ಪ್ರಮೀಳ ಶೆಟ್ಟಿ,  ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ ಅಧ್ಯಕ್ಷರು ಜಯರಾಮ್ ಬನನ್ , ರಾಜೇಶ್ ಶೆಟ್ಟಿ ನವಶಕ್ತಿ,  ಹರೀಶ್ ಶೆಟ್ಟಿ ನವಶಕ್ತಿ  ಅತಿಥಿಗಳನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶನ್ , ಜಿ.ಎಂ ಓಶಿಯನ್ ಪರ್ಲ್ ನಿತ್ಯಾನಂದ ಮಂಡಲ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಶಶಿಕುಮಾರ್  ಉಪಸ್ಥಿತರಿದ್ದರು.

ದಿ ಓಷ್ಯನ್ ಪರ್ಲ್ ಗೆ  ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು: 

ಪುತ್ತೂರು ಶಾಸಕ ಸಂಜೀವ ಮಠಂದೂರು   ದಿ ಓಷ್ಯನ್ ಪರ್ಲ್ ಗೆ  ಭೇಟಿ ನೀಡಿ ಹೋಟೆಲನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅಭಿನಂದನೆಯನ್ನು ತಿಳಿಸಿದರು.

 

LEAVE A REPLY

Please enter your comment!
Please enter your name here