ಕಾಸಿಂ ಪದ್ಮುಂಜ ರವರಿಗೆ ಬೀಳ್ಕೊಡುಗೆ ಸಮಾರಂಭ

0


ಪದ್ಮುಂಜ:  ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 34 ವರ್ಷಗಳಿಂದ ಪಂಪ್ ಚಾಲಕ ಸಿಬ್ಬಂಧಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ವಯೋ ನಿವೃತ್ತಿ ಹೊಂದಿರುವ ಕಾಸಿಂ ಪದ್ಮುಂಜ ರವರಿಗೆ ಬೀಳ್ಕೊಡುಗೆ ಸಮಾರಂಭ ಸೆ 29 ರಂದು ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಪಂ ಅಧ್ಯಕ್ಷರು ,ಉಪಾಧ್ಯಕ್ಷರು ,ಸದಸ್ಯರು ಪಂ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ, ಸಿಬ್ಬಂದಿಗಳು ಕಾಸಿಂ ರವರಿಗೆ ಶಾಲು, ಹೂ ಹಾರ, ಪಲಪುಷ್ಪ ನೀಡಿ ಸನ್ಮಾನಿಸಿದರು.

ಪಂ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಸಿಬ್ಬಂದಿ ವರ್ಗದವರ ವತಿಯಿಂದ ನೆನಪಿನ ಕಾಣಿಕೆಯಾಗಿ ಸೋಪಾವನ್ನು ನೀಡಿ ಅಭಿನಂದಿಸಿರು.

ಪಂ ಅಧ್ಯಕ್ಷೆ ಗಾಯತ್ರಿ,  ಸದಸ್ಯ ಸೀತಾರಾಮ ಮಡಿವಾಳರವರು ಮಾತನಾಡಿ ಶುಭಹಾರೈಸಿದರು.

ಕಾಸಿಂ ಪದ್ಮುಂಜ ರವರು ಮಾತನಾಡಿ ತನ್ನ ವೃತ್ತಿ ಜೀವನದಲ್ಲಿ ನಡೆದ ಸಿಹಿ ಕಹಿ ಘಟನೆಗಳನ್ನು ನೆನಪಿಸಿಕೊಂಡರು.ಸಿಬ್ಬಂದಿ ಉಮೇಶ್ ರವರು ಕಾಸಿಂ ಪದ್ಮುಂಜ ರವರ ಕಿರು ಪರಿಚಯ ಓದಿ ಹೇಳಿದರು. ಉಪಾಧ್ಯಕ್ಷೆ ಜಲಜಾಕ್ಷಿ,  ಕಾರ್ಯದರ್ಶಿ ರಮೇಶ್ ಕೆ, ಸಿಬ್ಬಂದಿ ಗಳಾದ ಗಿರಿಯಪ್ಪ ಲಕ್ಷ್ಮಿ, ಪ್ರದೀಪ, ಚಿರಂಜೀವಿ, ಪಂ ಸದಸ್ಯರು ಉಪಸ್ತಿತರಿದ್ದರು.

ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here