ಕಾಯರ್ತಡ್ಕ ದಲ್ಲಿ  ಸಿರಿಯನ್ ಕ್ಯಾಥೋಲಿಕ್ ವಿವಿದ್ದೋದ್ದೇಶ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನಾ ಸಮಾರಂಭ

0

ಕಾಯರ್ತಡ್ಕ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ನೂತನ ಶಾಖೆಯು ಕಾಯರ್ತಡ್ಕದಲ್ಲಿ ಅ.1 ರಂದು ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು  ಕಳೆಂಜ ಗ್ರಾಮ ಪಂಚಾಯತ್ ನ ಅಧ್ಯಕ್ಷ   ಪ್ರಸನ್ನ ಎ .ಪಿ ನೆರವೇರಿಸಿದರು.

ಕಳೆಂಜ ಸೈಂಟ್ ಸೆಭಾಸ್ಟಿಯನ್ಸ್ ಚರ್ಚ್ ಧರ್ಮಗುರುಗಳು ವಂದನೀಯ ಫಾ.ಜೋಸೆಫ್ ವಾಳೂಕಾರನ್ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರು ಅನಿಲ್ ಎ.ಜೆ ವಹಿಸಿದ್ದರು.

ನಿಡ್ಲೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ರಮೇಶ್ ಭಟ್ ಕಾಯಡ ಗಣಕ ಯಂತ್ರದ ಉದ್ಘಾಟನೆಯನ್ನು ನೆರವೇರಿಸಿ, ಸಿರಿಯನ್ ಕ್ಯಾತೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಮ್ಯಾಥ್ಯು ಪಿ.ಜೆ ಬದ್ರತಾ ಕೋಶದ ಉದ್ಘಾಟನೆಯನ್ನು ಮಾಡಿದರು. ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ  ಹಾಲಿ ನಿರ್ದೇಶಕರು, ಮಾಜಿ ಅಧ್ಯಕ್ಷರು ಸೆಬಾಸ್ಟಿಯನ್ ವಿ.ಟಿ ಇ-ಸ್ಟ್ಯಾಂಪಿಂಗ್ ಉದ್ಘಾಟನೆ ಮಾಡಿದರು.

ನಿಡ್ಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಷೇರು ಸರ್ಟಿಫಿಕೇಟ್ ನ್ನು ವಿತರಿಸಿದರು. ಕಳೆಂಜ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಧನಂಜಯ ಗೌಡ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಿ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷರು ಜಾರ್ಜ್ ಎಮ್ ವಿ ಉಳಿತಾಯ ಖಾತೆ ಪುಸ್ತಕ ವಿತರಿಸಿದರು.

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಅನಿಲ್ ಎ.ಜೆ ಪ್ರಾಸ್ತಾವಿಕ ನುಡಿಯನ್ನಾಡಿದರು.  ಕಾರ್ಯಕ್ರಮದಲ್ಲಿ ಅನುಷ ಬಳಗದವರಿಂದ ಪ್ರಾರ್ಥನೆ ನಡೆದು, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಅಂದಾನಿ ಕೆ.ಡಿ, ಜೈಸನ್ ಪಿ.ಎಸ್, ಬಾಬು ತೋಮಸ್, ಬಿಜು ಪಿ.ಪಿ, ಸೋಫಿ ಜೋಸೆಫ್, ಫಿಲೋಮಿನಾ ವಿ,  ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

 

 

 

 

 

 

LEAVE A REPLY

Please enter your comment!
Please enter your name here