ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ವಿಶೇಷ ಚೇತನರೊಂದಿಗೆ ಜನುಮದಿನ ಆಚರಿಸಿಕೊಂಡ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್

0

 

ಉಜಿರೆ: ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಉದ್ಯಮಿ, ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ, ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಅವರ ಜನುಮದಿನವನ್ನು ಉಜಿರೆಯ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ವಿಶೇಷವಾಗಿ ಆಚರಿಸಿತು. ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ವಿಶೇಷ ಚೇತನ ಮಕ್ಕಳೊಂದಿಗೆ ಕೆಲ ಹೊತ್ತು ಇದ್ದು, ಅವರೊಂದಿಗೆ ಬೆರೆತು ಹುಟ್ಟುಹಬ್ಬವನ್ನು ಆಚರಿಸಿದರು. ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಮೋಹನ್ ಕುಮಾರ್ ಅವರ ಸೇವಾ ಮನೋಭಾವದ ಅಭಿಮಾನದಿಂದ ಈ ವಿನೂತನ, ವಿಶಿಷ್ಟವಾಗಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಸಿದ್ದರು.

ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ

ಸಾನಿಧ್ಯ ಕೌಶಲ್ಯ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮೋಹನ್ ಕುಮಾರ್ ರವರ ಜನುಮದಿನದ ಪ್ರಯುಕ್ತ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಮಕ್ಕಳೊಂದಿಗೆ ಒಂದಾಗಿ ಒಟ್ಟಾಗಿ ಕಾಲ ಕಳೆದರು. ಈ ಮೂಲಕ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಂಡರು.

ವಿಶೇಷ ಚೇತನರೊಂದಿಗೆ ಕೇಕ್ ತುಂಡರಿಸಿ ಆಚರಣೆ, ಹಾಟ್ ಬಾಕ್ಸ್ ವಿತರಣೆ

ಸಾನಿಧ್ಯ ಕೇಂದ್ರದ ಸಂತ್ರಸ್ತ ಮಕ್ಕಳಿಂದಲೇ ಕೇಕ್ ಕತ್ತರಿಸುವ ಮೂಲಕ ಮೋಹನ್ ಕುಮಾರ್ ಜನುಮದಿನಾಚರಣೆ ಆಚರಿಸಿದರು. ಇದರ ಜೊತೆ ಎಲ್ಲರಿಗೂ ಹಾಟ್ ಬಾಕ್ಸ್ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಮೋಹನ್ ಕುಮಾರ್, ನಾನು ನೆಪ ಮಾತ್ರ ನನ್ನ ಸಾಧನೆಯ ಹಿಂದೆ ದೊಡ್ಡ ಬಳಗವಿದೆ. ಅವರ ಸಹಕಾರವೇ ನನಗೆ ಪ್ರೇರಣೆ. ಅಲ್ಲದೇ ಅಭಿಮಾನವಿಟ್ಟು ಕಾರ್ಯಕ್ರಮ ಆಯೋಜಿಸಿದ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ನ ಸರ್ವ ಸದಸ್ಯರಿಗೂ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಪತ್ನಿ ರೇಷ್ಮಾ, ಉದ್ಯಮಿಗಳಾದ ರಾಜೇಶ್ ಪೈ, ರಾಮಚಂದ್ರ ಶೆಟ್ಟಿ, ಲಕ್ಷ್ಮಣ ಸಪಲ್ಯ, ಪ್ರಮೋದ್ ಆರ್ ನಾಯಕ್, ಶಿವಾಜಿ ಸೇವಾ ಟ್ರಸ್ಟ್ ನ ಅರವಿಂದ್ ಕಾರಂತ್, ಕಾರ್ಯಕ್ರಮ ಆಯೋಜಿಸಿದ್ದ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಸರ್ವ ಸದಸ್ಯರು, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮಲ್ಲಿಕಾ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here