ಪಿಲತ್ತಡ್ಕದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ದನ ಕರುಗಳಿಗೆ ಗಾಯ

0

ಬೆಳ್ತಂಗಡಿ: ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು ದನ ಕರುಗಳು ಗಾಯಗೊಂಡಿರುವ ಘಟನೆ ಪಿಲತ್ತಡ್ಕ ಎಂಬಲ್ಲಿ ಅ.2 ರಂದು ನಡೆದಿದೆ.

ಪಿಲತ್ತಡ್ಕ ನಿವಾಸಿ ಪೂವಪ್ಪ ಪೂಜಾರಿ ಎಂಬವರ ಪುತ್ರ ಸುರೇಶ ಹೈನುಗಾರಿಕೆ ಮಾಡುತ್ತಿದ್ದು ಹಾಲು ಕರೆಯುವ ಐದು ದನ ಹಾಗೂ ಇವುಗಳ ಐದು ಕರುಗಳನ್ನು ಕಟ್ಟಿ ಹಾಕಿದ್ದ ಹಟ್ಟಿಗೆ ಬೆಂಕಿ ತಗುಲಿದ್ದು ಬೈಹುಲ್ಲು, ಹಿಂಡಿ ಇನ್ನಿತರ ಸಾಮಾಗ್ರಿಗಳು ಸುಟ್ಟು ಹೋಗಿವೆ. ಬೆಂಕಿಯಿಂದ ದನ ಕರುಗಳಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದೆ.

ಮನೆ ಮಂದಿ ಹಟ್ಟಿಗೆ ಸೊಪ್ಪು ತರಲು ತೆರಳಿದ್ದ ವೇಳೆ ಹಟ್ಟಿಯ ಭಾಗದಿಂದ ಹೊಗೆ ಕಂಡುಬಂದಿದೆ. ಪಕ್ಕದ  ಮನೆಯ ಶ್ರೀಧರ ಪೂಜಾರಿ ಅವರಿಗೆ ಕಂಡುಬಂದಿದೆ. ಅಷ್ಟರಲ್ಲಾಗಲೇ ಬೆಂಕಿ ಹಟ್ಟಿಯನ್ನು ವ್ಯಾಪಿಸಿತ್ತು. ಈ ಸಮಯ ದನಕರುಗಳನ್ನು ಕಟ್ಟಿ ಹಾಕಿದ್ದ ಹಗ್ಗಗಳನ್ನಬು ತುಂಡರಿಸಿ ಹೊರಗೆ ಬಿಟ್ಟಿದ್ದಾರೆ. ಆದರೂ ಬೆಂಕಿ ವ್ಯಾಪಿಸಿ ದನ ಕರುಗಳಿಗೆ ಗಾಯಗಳಾಗಿವೆ.

LEAVE A REPLY

Please enter your comment!
Please enter your name here