ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಗಾಂಧಿ ಜಯಂತಿ ಆಚರಣೆ

0

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಪಕ್ಷದ ಕಛೇರಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಹೂ ಹಾರ ಹಾಕಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಬಳಿಕ ಬೆಳ್ತಂಗಡಿ ನಗರದಲ್ಲಿರುವ ಅನುಗ್ರಹ ಚಾರಿಟೇಬಲ್ ಟ್ರಸ್ಡ್ ನಡೆಸುವ ವೃಧ್ಧಾಶ್ರಮಕ್ಜೆ ಭೇಟಿ ನೀಡಿ ಅವರೊಂದಿಗೆ ಸಮಯವನ್ನು ಕಳೆದು ಹಣ್ಣು ಹಂಪಲು ಗಳನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ನವಾಝ್ ಶರೀಫ್ ಕಟ್ಟೆ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಫಝಲ್ ರಹಮಾನ್‌ ಉಜಿರೆ, ಅಶ್ರಪ್ ಕಟ್ಟೆ, ಸಾದಿಕ್ ಲಾಯಿಲಾ, ನಿಝಾಮ್ ಕಟ್ಟೆ, ಎಸ್ ಡಿ ಪಿ ಐ ಉಜಿರೆ ಬ್ಲಾಕ್‌ ಅಧ್ಯಕ್ಷರಾದ ಅಶ್ರಪ್ ಚಾರ್ಮಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here