ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯಲ್ಲಿ ಗಾಂಧಿಜಯಂತಿ ಆಚರಣೆ

0

ಪುಂಜಾಲಕಟ್ಟೆ:  ನಾವು ಆಚರಿಸುತ್ತಿರುವ ಮಹಾತ್ಮ ಗಾಂಧೀಜಿಯವರ ಜನ್ಮದಿನೋತ್ಸವ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜಯಂತಿಯ ಈ ಒಂದು ಕಾರ್ಯಕ್ರಮವು ಅರ್ಥಪೂರ್ಣವಾಗಬೇಕಾದರೆ , ಆಚರಣೆ ಮಾಡುವುದಕ್ಕಿಂತ ನಮ್ಮ ಬದುಕಿನಲ್ಲಿ ಪರಿಪಾಲನೆ ಮಾಡಿದಾಗ ಮಾತ್ರ ಇದಕ್ಕೆ ನೈಜ ಅರ್ಥ ಬರುತ್ತದೆ. ಈ ಕಾರ್ಯವನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳಬೇಕು” ಎಂದು ಉದಯಕುಮಾರ್ ಬಿ ಹೇಳಿದರು ‌.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಉಪ ಪ್ರಾಂಶುಪಾಲರಾಗಿದ್ದು ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಎನ್. ಸಿ. ಸಿ ಅಧಿಕಾರಿ ನಿರಂಜನ್ ಜೈನ್ ಐ, ಸಂಸ್ಥೆಯ ಶಿಕ್ಷಕ ಬಂಧುಗಳಾದ ಗೋಪಾಲ್ , ಶಾಂತ ಎಸ್, ಪದ್ಮಜಾ ಎಂ, ಸತ್ಯಕಿರಣ್ ಕುಮಾರ್, ರಾಧಿಕಾ ನಾಯಕ್, ಹರಿಪ್ರಸಾದ್ ಆರ್, ಹಿಲೇರಿ ಡಿಸೋಜಾ, , ಮೇಘ, ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್ ದೋಟ, ರಶ್ಮಿ ಮತ್ತು ಧರಣೇಂದ್ರ ಕೆ ಸಹಕಾರದೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here