ನಡ ಸರಕಾರಿ ಪ. ಪೂ. ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

0


ನಡ :ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅ.2 ರಂದು ಗಾಂಧಿ ಜಯಂತಿ ಆಚರಣೆಯನ್ನು ಗಾಂಧೀಜಿ ಹಾಗೂ ಶಾಸ್ತ್ರೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಹನೀಯರೀರ್ವರ ಪಾತ್ರವನ್ನು ಕೊಂಡಾಡಿದರು. ಬಳಿಕ ‘ಕಲ್ಪನಾ ಚಾವ್ಲಾ ರೇಂಜರ್ ಘಟಕ’ದ ವತಿಯಿಂದ ಸರ್ವ ಧರ್ಮ ಪ್ರಾರ್ಥನಾ ಸಭೆ ಜರುಗಿತು. ರೇಂಜರ್ ವಿದ್ಯಾರ್ಥಿನಿಯರು ಬಿಡಿಸಿದ ಸರ್ವ ಧರ್ಮ ಸಮನ್ವಯದ ಪುಷ್ಪ ರಂಗೋಲಿ ಎಲ್ಲರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here