ಮೊಗ್ರು: ದಸರಾ ಹಬ್ಬದ ಪ್ರಯುಕ್ತ ನವರಾತ್ರಿ ಭಜನಾ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು

0

ಮೊಗ್ರು :  ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು ಬೆಳ್ತಂಗಡಿ ತಾಲೂಕು ಇದರ ದಸರಾ ಹಬ್ಬದ ಪ್ರಯುಕ್ತ ನವರಾತ್ರಿ ಭಜನೆ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು ಅ.2 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಗೇರಡ್ಕ ಪರಿಸರ ದಲ್ಲಿ ಅಂಗನವಾಡಿ ಆರಂಭ ದ ದಿನದಿಂದ 34ವರ್ಷ ಕಾಲ ಕರ್ತವ್ಯ ನಿರ್ವಹಿಸಿ ನಿವೃತಿ ಹೊಂದಿರುವ  ಜಾನಕಿ ಧರ್ನಪ್ಪ ಗೌಡ ನೈಮಾರ್ ಇವರಿಗೆ  ಶ್ರೀ ದುರ್ಗಾನುಗ್ರಹ ಭಜನಾ ಮಂದಿರದ ಪರವಾಗಿ ಸನ್ಮಾನಿಸಲಾಯಿತು. ಹಾಗೂ ಸೀಮಿತ ಗ್ರಾಮಗಳ ಕಬಡ್ಡಿ ಪಂದ್ಯಾಟದಲ್ಲಿ ಹಿಂದೂಸ್ತಾನ್ ಫ್ರೆಂಡ್ಸ್ ಕಟ್ಟೆಚ್ಚರ್ ಪ್ರಥಮ, ಕೊಟ್ಟಿಚೆನ್ನಯ ಫ್ರೆಂಡ್ಸ್ ಮರೀಪ್ಪದೆ ದ್ವಿತೀಯ, ಕೋಟಿ ಚೆನ್ನಯ ಕಟ್ಟೆಚ್ಚರ್ ಫ್ರೆಂಡ್ಸ್ ಮರೀಪ್ಪದೆ ಬಿ ತಂಡ ತೃತಿಯ ಹಾಗೂ ಜ್ಞಾನ ಜ್ಯೋತಿ ಅಡೆಂಜ ಚತುರ್ಥ ಸ್ಥಾನ ಪಡೆದುಕೊಂಡರು.

ಸ್ಥಳೀಯ ಗ್ರಾಮಸ್ಥರಿಗೆ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಜನಾ ಮಂದಿರ ಪದಾಧಿಕಾರಿಗಳು, ಊರಿನ ಹಿರಿಯರು ಮಹಿಳೆಯರು, ಸ್ಥಳೀಯ ಗ್ರಾಮದ ಆಟಗಾರರು ಭಾಗವಹಿಸಿದರು.

LEAVE A REPLY

Please enter your comment!
Please enter your name here