ಅ.30: ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ಅಕ್ಷರೋತ್ಸವ ಸಾಹಿತ್ಯ ಮೇಳ

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ಅಕ್ಷರೋತ್ಸವ ಸಾಹಿತ್ಯ ಮೇಳ ಅ.30 ರಂದು ನಡೆಯಲಿದೆ.

ಆ ಪ್ರಯುಕ್ತ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ. ಆಯ್ದ ಕವಿತೆಗಳಿಗೆ ರಾಗ ಸಂಯೋಜಿಸಿ ಕವನ ವಾಚನ-ಗಾಯನ-ನೃತ್ಯ ಕುಂಚ ಕಾರ್ಯಕ್ರಮ ನಡೆಯಲಿದೆ. ಆಯ್ಕೆಯಾದ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ, ಗ್ರಂಥ ಗೌರವ ನೀಡಲಾಗುವುದು.

ಜೊತೆಗೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ. ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ಅಧ್ಯಕ್ಷರು, ಆಡಳಿತ ಮಂಡಳಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇಲ್ಲಿಗೆ ಅ.20 ರ ಒಳಗಾಗಿ ಕಳುಹಿಸಕೊಡತಕ್ಕದ್ದು. ಅಂಚೆ [email protected] ಈ ವಿಳಾಸಕ್ಕೆ ಕವಿತೆಗಳನ್ನು ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಜಯರಾಮ: 7411831005 ಈ ನಂಬರ್ ಗೆ ಕರೆ ಮಾಡಬಹುದೆಂದು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here