ಅಳದಂಗಡಿ,ಬಡಗಕಾರಂದೂರು ಶ್ರೀ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಆಕರ್ಷ್ ಆಗ್ರೋ ಟೆಕ್ ಶುಭಾರಂಭ

0

ಅಳದಂಗಡಿ: ಅಳದಂಗಡಿ, ಬಡಗಕಾರಂದೂರು, ಶ್ರೀ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಆಕರ್ಷ್ ಆಗ್ರೋ ಟೆಕ್ ಅ.4 ರಂದು ಶುಭಾರಂಭಗೊಂಡಿತು.

ಅಳದಂಗಡಿ ಗ್ರಾ.ಪಂ  ಅಧ್ಯಕ್ಷೆ ಸೌಮ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರು ಶಿವಾನಂದ ಹೆಗ್ಡೆ, ಅಳದಂಗಡಿ ಸಹಕಾರಿ ಸಂಘದ ನಿರ್ದೇಶಕ ಶಶಿಧರ ಜೈನ್, ಕಾಂಪ್ಲೆಕ್ಸ್ ಮಾಲಕ ಕೃಷ್ಣಪ್ಪ ಪೂಜಾರಿ, ಅಳದಂಗಡಿ ಗ್ರಾ.ಪಂ ಸದಸ್ಯರಾದ ರವಿ ಪೂಜಾರಿ, ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಶುಭಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕರಾದ ಯಶೋಧರ ಗೌಡ ಮತ್ತು ಚೇತನಾ ಯಶೋಧರ ಗೌಡ ನೆಲ್ಲಿಗುಡ್ಡೆ, ಲೋಕಮ್ಮ, ಲಿಂಗಪ್ಪ ಗೌಡ, ಶಾರದಾ , ಲೋಕಯ್ಯ  ಗೌಡ, ಶಿಬಾಜೆ ಗ್ರಾಮ ಉಪಾಧ್ಯಕ್ಷ  ವಿನಯ ಚಂದ್ರ ಸತ್ಕರಿಸಿದರು.

ಇಲ್ಲಿ ರಸಗೊಬ್ಬರಗಳು, ಚಿಪ್ಪು ಸುಣ್ಣ, ನರ್ಸರಿ ಗಿಡಗಳು, ಪೈಪ್ ಫಿಟ್ಟಿಂಗ್ಸ್, ಟರ್ಪಾಲುಗಳು, ನರ್ಸರಿ ಪ್ಲಾಸ್ಟಿಕ್, ಕೀಟನಾಶಕಗಳು, ಸಾವಯವ ಗೊಬ್ಬರ, ಪೈಪ್ಸ್, ಸ್ಪ್ರಿಂಕ್ಲರ್, ಇರಿಗೇಶನ್ ಪೈಪ್, ಸಣ್ಣ ಕಟ್ಟಿಂಗ್ ಮೆಷಿನ್ ಹಾಗೂ ಇತರ ಕೃಷಿಗೆ ಬೇಕಾದ ಅಗತ್ಯ ಸಲಕರಣೆಗಳು ಮಿತದರದಲ್ಲಿ ಇಲ್ಲಿ ದೊರೆಯುತ್ತದೆ.

LEAVE A REPLY

Please enter your comment!
Please enter your name here