ಗುರುವಾಯನಕೆರೆ: ಕೆನರಾ ಸ್ಟೈನ್‌ಲೆಸ್ ಮತ್ತು ಸ್ಟೀಲ್ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆ

0

ಗುರುವಾಯನಕೆರೆ: ಮಂಗಳೂರು ರಸ್ತೆ ಪಿಲಿಚಾಮುಂಡಿಕಲ್ಲು ಶ್ರೀ ಗುರು ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಸ್ಟೈನ್‌ಲೆಸ್ ಮತ್ತು ಸ್ಟೀಲ್ ಇಂಡಸ್ಟ್ರೀಸ್‌ನಲ್ಲಿ ಆಯುಧ ಪೂಜೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕಳೆದ 11 ವರ್ಷಗಳಿಂದ ಕೆನರಾ ಸ್ಟೈನ್‌ಲೆಸ್ ಮತ್ತು ಸ್ಟೀಲ್ ಇಂಡಸ್ಟ್ರೀಸ್ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸರ್ವಿಸ್ ನೀಡುವುದರೊಂದಿಗೆ ಗ್ರಾಹಕರ ಪ್ರೀತಿ ವಿಶ್ವಾಸ ನಂಬಿಕೆ ಗಳಿಸಿದ ಜಿಲ್ಲೆಯ ಪ್ರಸಿದ್ಧ ಸಂಸ್ಥೆಯಳೊಂದಾಗಿದೆ. ಸಂಸ್ಥೆಯ ಮಾಲಕ ವಿನಯಚಂದ್ರ ಬೋಳ ಇವರು ಗ್ರಾಹಕರಿಗೆ ಅನುಗುಣವಾಗಿ ವಿವಿಧ ಮಾದರಿಯ ಬಿಲ್ಡಿಂಗ್ ಹಾಗೂ ಮನೆಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಸಾಮಾಜಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಕೆ.ವಸಂತ ಬಂಗೇರ, ಪ್ರಭಾಕರ ಬಂಗೇರ, ಜಿ.ಪಂ. ಮಾಜಿ ಸದಸ್ಯ ತುಳಸಿ ಹಾರಬೆ, ಕಳಿಯ ಸಿಎ ಬ್ಯಾಂಕ್ ನಿರ್ದೇಶಕ ರಾಜ್‌ಪ್ರಕಾಶ್ ಶೆಟ್ಟಿ, ವಿಕಾಸ ಬ್ಯಾಂಕ್‌ನ ಉಪಾಧ್ಯಕ್ಷ ಯೋಗೀಶ್, ಕುವೆಟ್ಟು ಗ್ರಾ.ಪಂ. ಮಾಹಿತಿಯು ಅಧ್ಯಕ್ಷ ಅಶೋಕ್ ಕೋಟ್ಯಾನ್, ವೈಭವ್ ಹಾರ್ಡ್ ವೇರ್ ಮಾಲಕ ಉದ್ಯಮಿ ಸೀತಾರಾಮ ಶೆಟ್ಟಿ,ಪುರುಷೋತ್ತಮ ಶೆಟ್ಟಿ ಸೋಣಂದೂರು,ತಾರಾನಾಥ ಮದ್ದಡ್ಕ, ಗುರುವಾಯನಕೆರೆ ಶಂಕರ್ ಬಿಲ್ಡಿಂಗ್ ಪ್ರೊಡೆಕ್ಟ್ ಮುಖ್ಯಸ್ಥರು,ಗುರುವಾಯನಕೆರೆ ಕೆನರಾ ಬ್ಯಾಂಕ್ ಸಿಇಓ ಮತ್ತು ಸಿಬ್ಬಂದಿವರ್ಗ, ಮಡಂತ್ಯಾರು ಸಿ.ಎ ಬ್ಯಾಂಕ್ ನ ಸಿಇಓ ಮತ್ತು ನಿರ್ದೇಶಕರುಗಳು, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

ಸನ್ಮಾನ:

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ,ಶ್ರೀನಿವಾಸ್ ಅಸ್ರಣ್ಣ ಮದ್ದಡ್ಕ, ಗುತ್ತಿಗೆದಾರ ರಾಜ್‌ಪ್ರಕಾಶ್ ಶೆಟ್ಟಿ, ಮಾಲಕರ ಅಜ್ಜಿ ವೆಂಕಮ್ಮ ಬಿರ್ಮಜಲು, ಮಾತೃಶ್ರೀ ಶ್ರೀಮತಿ ಬೇಬಿ ಚೆನ್ನಪ್ಪ ಅಂಚನ್ ಬೋಳ,ಮೆಲ್ವಿನ್ ಕೊರಯಾ,ಪ್ರವೀಣ್ ಚೌಧರಿ ಮುಂಬಯಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉದ್ಯೋಗಿಗಳಾದ ಸುರೇಶ್ ಆಚಾರ್ಯ, ಸುಧೀರ್ ಕುಮಾರ್, ರಕ್ಷಿತ್, ಹರ್ಷಿತ್, ಕವನ್, ಚಂದ್ರೇಶ್, ಶುಭ, ಸವಿತಾ, ವಿಶಾಲ, ಪವಿತ್ರಾ ಇವರನ್ನು ಗುರುತಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ವಿನಯಚಂದ್ರ ಮತ್ತು ಶ್ರೀಮತಿ ಶುತಿ ಸ್ವಾಗತಿಸಿ, ಸತ್ಕರಿಸಿದರು.ಮಾ! ಮೋಹಿತ್ ವಿ.ಎಸ್ ಸಾಲಿಯಾನ್, ಮಾ! ಮೋದಕ್ ವಿ.ಎಸ್ ಸಾಲಿಯಾನ್ ಸಹಕರಿಸಿದರು. ಸಂತೋಷ್ ಪಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here