ಕೊಯ್ಯೂರು: ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ಆಯುಧ ಪೂಜೆ, ವಾಹನ ಪೂಜೆ

0


ಕೊಯ್ಯೂರು : ಇಲ್ಲಿಯ ಸಾರ್ವಜನಿಕ ಶ್ರೀ ಮಹಾಮ್ಮಾಯಿ ಪೂಜಾ ಸಮಿತಿ ಆದೂರು ಪೆರಾಲ್ ಕೊಯ್ಯೂರು ಹಾಗೂ ಊರವರ ಸಹಕಾರದೊಂದಿಗೆ ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ಆಯುಧ ಪೂಜೆ ಮತ್ತು ವಾಹನ ಪೂಜೆ ಅ.4 ರಂದು ಜರುಗಿತು.

ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಿದರು. ಮಹಾಪೂಜೆ ನಂತರ ಆದೂರ್ ಪೆರಾಲಿನಿಂದ ಕೊಯ್ಯೂರು ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಸಿದರು.
ಅದೂರು ಪೇರಾಲು ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ವಿಧಿವತ್ತಾಗಿ ನಡೆಸಿದರು.

ಈ ಸಂದರ್ಭದಲ್ಲಿ ಮಹಾಮ್ಮಾಯಿ ಪೂಜಾ ಸಮಿತಿಯ ಅಧ್ಯಕ್ಷರು,ಪದಾಧಿಕಾರಿ,ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸ್ಥಳೀಯ ಭಕ್ತಾದಿಗಳು ಬಾಗವಹಿಸಿ, ಸಹಕರಿಸಿದರು.

LEAVE A REPLY

Please enter your comment!
Please enter your name here