ನಾಳ ಶರನ್ನವರಾತ್ರಿ ವಿಶೇಷ ಪೂಜೆ ಹಾಗೂ ಭಜನೋತ್ಸವ ಕಾರ್ಯಕ್ರಮ

0


ನಾಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಶರನ್ನವರಾತ್ರಿ ವಿಶೇಷ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮ ಸ.26 ರಂದು ಆ.5 ರತನಕ ವಿಜೃಂಭಣೆಯಿಂದ ಜರುಗಿತು.
ಸೆ.26 ರಿಂದ ಪ್ರತಿ ದಿನ ರಾತ್ರಿ 7 ರಿಂದ ವಿವಿಧ ಆಹ್ವಾನಿತ ತಂಡದ ಭಜನಾ ಮಂಡಳಿಗಳ ಸದಸ್ಯರಿಂದ ಭಜನೋತ್ಸವ ಕಾರ್ಯಕ್ರಮ ಹಾಗೂ ದೇವರಿಗೆ ವಿಶೇಷ ಪೂಜೆ,ಭಜನಾ ಸೇವಾಕರ್ತರಿಂದ ಭಜನಾ ಸೇವೆ ಮತ್ತು ಅನ್ನದಾನ ಸೇವಾ ಕರ್ತರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಆಯುಧ ಪೂಜೆ:

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಸಂದರ್ಭದಲ್ಲಿ ಅ.4 ರಂದು ಹಗಲು- ರಾತ್ರಿ ಆಯುಧ ಪೂಜೆ ಮತ್ತು ಸಾವಿರಾರು ವಾಹನಗಳಿಗೆ ವಿಶೇಷ ಪೂಜೆ ಜರುಗಿತು. ರಾತ್ರಿ 7 ರಿಂದ ಕುಳಾಯಿ ಹೊಸಬೆಟ್ಟು ಬಾಲವಿಕಾಸ ಭಜನಾ ಮಂಡಳಿ ವತಿಯಿಂದ ಸುಶ್ರಾವ್ಯ ಸಂಗೀತ ನಿರ್ದೇಶನದ ಮೂಲಕ ಕುಣಿತ ಭಜನೋತ್ಸವ ಭಕ್ತಾದಿಗಳ ಮನಸೂರೆ ಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮ:

ಸೆ.29 ರಂದು ರಾತ್ರಿ ಜಿಲ್ಲೆಯ ಪ್ರಸಿದ್ಧ ತೆಂಕು ತಿಟ್ಟು ಕಲಾವಿದರಿಂದ “ದಕ್ಷ ಯಜ್ಞ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟ, ಅ.2.ರಂದು ರಾತ್ರಿ ಯಕ್ಷರಾಧನ ಪ್ರತಿಷ್ಠಾನ ನಾಳ ಗೇರುಕಟ್ಟೆ ಇವರ ನೇತೃತ್ವದಲ್ಲಿ ಜಿಲ್ಲೆಯ ವೃತ್ತಿಪರ ಕಲಾವಿದರಿಂದ ಅಭಿಮನ್ಯು-ರಕ್ತರಾತ್ರಿ ಎಂಬ ಯಕ್ಷಗಾನ ಬಯಲಾಟ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಪೂಜಾ ವಿಧಿವತ್ತಾಗಿ ಜರುಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ,ಸದಸ್ಯರಾದ, ವಸಂತ ಮಜಲು,ಜನಾರ್ದನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು, ಆಂಭಾ ಬಿ. ಆಳ್ವ ನಾಳ,ವಿಜಯ ಹೆಚ್.ಪ್ರಸಾದ್, ಉಮೇಶ್ ಕೇಲ್ದಡ್ಕ,ರಾಜೇಶ್ ಶೆಟ್ಟಿ,  ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ,ಕಾರ್ಯದರ್ಶಿ ಲೋಕೇಶ್ ಎನ್.ಗೇರುಕಟ್ಟೆ, ಮತ್ತು ಶ್ರೀ ದುರ್ಗಾ ಮಾತೃ ಮಂಡಳಿ ಸಮಿತಿ ಅಧ್ಯಕ್ಷೆ ರೀತಾ ಚಂದ್ರಶೇಖರ ನಾಳ,ಕಾರ್ಯದರ್ಶಿ ಮಮತ ಆಳ್ವ ನಾಳ, ಸದಸ್ಯರು ಉಪಸ್ಥಿತರಿದ್ದು, ಅನ್ನದಾನ ಸೇವಾ ಕರ್ತರನ್ನು,ಭಜನಾ ಮಂಡಳಿ ಸದಸ್ಯರನ್ನು,ಭಜನಾ ಸೇವಾ ಕರ್ತರನ್ನ,ಅನ್ನದಾನ ಸೇವಾ ಕರ್ತರನ್ನು ಹಾಗೂ ತಾಲೂಕಿನ ಪತ್ರಕರ್ತರನ್ನು ದೇವಸ್ಥಾನದ ವತಿಯಿಂದ ವಿಶೇಷವಾಗಿ ಗೌರವಿಸಿದರು.

ಊರ-ಪರವೂರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here