ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಕುಕ್ಕೇಡಿ – ನಿಟ್ಟಡೆ ಇದರ ವಾರ್ಷಿಕ ಮಹಾಸಭೆ

0

ಕುಕ್ಕೇಡಿ:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗ್ರಾಮ ಶಾಖೆ ಕುಕ್ಕೇಡಿ – ನಿಟ್ಟಡೆ ಇದರ ವಾರ್ಷಿಕ ಮಹಾಸಭೆಯು ಕುಕ್ಕೇಡಿ ಡಾll ಬಿ ಆರ್ ಅಂಬೇಡ್ಕರ್ ಭವನದಲ್ಲಿ ಗ್ರಾಮ ಸಮಿತಿಯ ಸಂಚಾಲಕರಾದ ಶ್ರೀಧರ್ ಕುಂಡದಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅತಿಥಿಗಳನ್ನು ಸಂಘಟನಾ ಸಂಚಾಲಕರಾದ  ನೇತ್ರರವರು ಸ್ವಾಗತಿಸಿ, ಚರಣ್ ರಾಜ್ ನೆಲ್ಲಿಗುಡ್ಡೆ ಗತಸಭೆಯ ವರದಿಯನ್ನು ವಾಚಿಸಿ, ಸಂಘಟನಾ ಸಂಚಾಲಕರಾದ ಸಂತೋಷ್ ಪಿಜತ್ತಪಲ್ಕೆ ಸಂಘಟನೆಯ ಮುಂದಿನ ಕಾರ್ಯಸೂಚಕವನ್ನು ಸಭೆಗೆ ವಿವರಿಸಿದರು.

ಗ್ರಾಮ ಪಂಚಾಯತಿನಿಂದ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷದಿಂದ ವಿದ್ಯಾರ್ಥಿ ವೇತನ ನೀಡದಿರುವ ಬಗ್ಗೆ ಚರ್ಚಿಸಲಾಯಿತು ಹಾಗೂ ಸಮುದಾಯ ಭವನಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತಾಯಿ ಅಥವಾ ಪತ್ನಿಯ ಹೆಸರಿಡಲು ಗ್ರಾಮ ಪಂಚಾಯತಿಗೆ ಸಂಘಟನೆಯಿಂದ ಮನವಿ ಮಾಡಿದರು ಇದರ ಬಗ್ಗೆ ಮೃದು ಧೋರಣೆ ತೋರುತಿರುವ ಗ್ರಾಮ ಪಂಚಾಯತಿನ ವಿರುದ್ಧ ಪ್ರತಿಭಟನೆ ಮಾಡುವುದರ ಬಗ್ಗೆ ಚರ್ಚಿಸಲಾಯಿತು.

ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಜುಶ್ರೀ ಭಜನಾ ಮಂಡಳಿಯ ಹತ್ತಿರ ಕೇವಲ 40 ಸೆಂಟ್ಸ್ ಡಿಸಿ ಮನ್ನಾ ಭೂಮಿ ಇದ್ದು, ಇದು ಪ್ರಸ್ತುತ ಸಾರ್ವಜನಿಕ ಆಟದ ಮೈದಾನವಾಗಿ ಉಪಯೋಗಿಸುತ್ತಾ ಬರುತಿದ್ದು ಇದನ್ನು ಭಜನಾ ಮಂಡಳಿಯವರು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಬಳಕೆಗೆ ಉಪಯೋಗಿಸಲು ಪ್ರಯತ್ನಿಸುತಿದ್ದಾರೆ, ಈ ಡಿಸಿ ಮನ್ನಾ ಭೂಮಿಯನ್ನು ಈಗ ಇರುವ ಹಾಗೆ ಯಥಾ ಸ್ಥಿತಿಯಲ್ಲಿ ಇರಲು ಮುಂದಿನ ದಿನಗಳಲ್ಲಿ ಈ ಸಾರ್ವಜನಿಕ ಆಟದ ಮೈದಾನದಲ್ಲಿ ಡಿಸಿ ಮನ್ನಾ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ತಾಲೂಕು ಪ್ರಧಾನ ಸಂಚಾಲಕರಾದ ಕೆ. ನೇಮಿರಾಜ್ ಕಿಲ್ಲೂರು, ತಾಲೂಕು ಸಂಘಟನಾ ಸಂಚಾಲಕರಾದ ಶೇಖರ್ ಕುಕ್ಕೇಡಿ, ಹೋಬಳಿ ಸಂಚಾಲಕರಾದ ವಿಜಯ್ ಕುಮಾರ್ ಬಜಿರೆ, ಹೋಬಳಿ ಸಂಘಟನಾ ಸಂಚಾಲಕರಾದ ರಮೇಶ್ ನೆಲ್ಲಿಂಗೇರಿ, ಗ್ರಾಮ ಮಹಿಳಾ ಸಮಿತಿಯ ಸಂಚಾಲಕರಾದ ಶ್ರೀಮತಿ ಲಲಿತಾ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಅಜಿತ್ ಅಮೈಪಲ್ಕೆ ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಾಗವಹಿಸಿದ್ದರು.

ದಿನೇಶ್ ಕುಕ್ಕೇಡಿ ಸಭೆಯನ್ನು ನಿರ್ವಹಿಸಿ ಧನ್ಯವಾದ ನೆರವೇರಿಸಿದರು.

LEAVE A REPLY

Please enter your comment!
Please enter your name here