ಕೊಯ್ಯೂರು : ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ, ಆಯುಷ್ಮಾನ್ ಆಭಾ, ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ

0

ಕೊಯ್ಯೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ “ಸೇವಾ” ಪಾಕ್ಷಿಕ” ಕಾರ್ಯಕ್ರಮದ ಪರಿಕಲ್ಪನೆಯಲ್ಲಿ ಅ.5ರಂದು ಭಾರತೀಯ ಜನತಾ ಪಾರ್ಟಿ ಕೊಯ್ಯೂರು ಶಕ್ತಿಕೇಂದ್ರ,ಮತ್ತು ಬೂತ್ ಸಮಿತಿ 155 ಕೊಯ್ಯೂರು ದೇವಸ್ಥಾನ ವತಿಯಿಂದ ಆಯುಷ್ಮಾನ್ ಆಭಾ ,ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಸ,ಹಿ,ಪ್ರಾಥಮಿಕ ಶಾಲೆ, ಕೊಯ್ಯೂರು ದೇವಸ್ಥಾನ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಮಂಡಲದ ಅಧ್ಯಕ್ಷರು  ಜಯಂಕೋಟ್ಯಾನ್  ನೆರವೇರಿಸಿ ಶುಭ ಕೋರಿದರು.ವೇದಿಕೆಯಲ್ಲಿ  ಕೊಯ್ಯೂರು  ಗ್ರಾ.ಪಂ ಅಧ್ಯಕ್ಷರು ಜಗನ್ನಾಥ ಮಲೆಬೆಟ್ಟು, ಮಂಡಲದ ಉಪಾಧ್ಯಕ್ಷರು ಸೀತಾರಾಮ್ ಬೆಳಾಲ್ , ಕುವೆಟ್ಟು ಮಹಾಶಕ್ತಿಕೇಂದ್ರದ ಅಧ್ಯಕ್ಷರು  ದಾಮೋದರ ಗೌಡ ಬೆರ್ಕೆ , ಕೊಯ್ಯೂರು ಶಕ್ತಿ ಕೇಂದ್ರದ ಅಧ್ಯಕ್ಷರು  ತಾರಾನಾಥ ಗೌಡ ಬಜಿಲ,  ಸುಮಿತ ,ಉಪಾಧ್ಯಕ್ಷರು ಗ್ರಾ,ಪಂ,  ವಸಂತ ಗೌಡ ಪಿಜಕ್ಕಳ, ಅಧ್ಯಕ್ಷರು ಬೂತ್ ಸಮಿತಿ ಕೊಯ್ಯೂರು ದೇವಸ್ಥಾನ ,ಮತ್ತು ಶ್ರೀ ಅವಿನಾಶ್ ಎ,ಆರ್, ಐ ಟಿ ಐ ಇ, ಸೇವಾ, ಜಿಲ್ಲಾ ಸಂಯೋಜನಾಧಿಕಾರಿ ಇವರು ಆಯುಷ್ಮಾನ್ ಆಬಾ ಕಾರ್ಡ್ ನ ಪ್ರಯೋಜನದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ ಕಾರ್ಡ್ ನೋಂದಣಿ ಮಾಡಲು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಆಚಾರ್ಯ, ಹರೀಶ್ ಗೌಡ, ಶ್ರೀಮತಿ ಶಾರದಾ, ಶ್ರೀ ಮತಿ ದಿವ್ಯಾ,ಉಪಸ್ಥಿತರಿದ್ದರು ಶ್ರೀ ದೇವಿ ಸ್ಟುಡಿಯೋ ಆದೂರ್ ಪೇರಾಲ್, ಮತ್ತು ಜಿ,ಕೆ ಶರ್ಮಾ, ಯೋಗಕ್ಷೇಮ ಸೇವಾಕೇಂದ್ರ ಆದೂರ್ ಪೇರಾಲ್, ಇವರ ಸಂಪೂರ್ಣ ಸಹಕಾರದಿಂದ ಹಾಗೂ ಬೂತ್ ಸಮಿತಿಯ ಕಾರ್ಯದರ್ಶಿ ಗಿರೀಶ್ ದೇವಾಡಿಗ ಗಾಣದಕೊಟ್ಟಿಗೆ, ಪಕ್ಷದ ಕಾರ್ಯಕರ್ತರಾದ ದಿನೇಶ ಗೌಡ,ಜಾನ್ಲಾಪು, ಜಯಾನಂದ ಗೌಡ ಕಿನ್ಯಾಜೆ,ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಗೌಡ ಸ್ವಾಗತಿಸಿ ಸುಧಾಕರ ದೇವಾಡಿಗ ಪಿಜಕ್ಕಳ, ಧನ್ಯವಾದ ನೆರವೇರಿಸಿದರು.

200 ಕ್ಕೂ ಮೇಲ್ಪಟ್ಟು ಜನರು ನೋಂದಣಿ ಮಾಡಿಕೊಂಡರು.

 

LEAVE A REPLY

Please enter your comment!
Please enter your name here