ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನೋ ವೀಕ್ ಕಾರ್ಯಕ್ರಮ

0

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ಚಾಪ್ಟರ್ ಹಾಗೂ ರಾಮ್ಕೋ ಸಿಮೆಂಟ್ಸ್ ಇವರ ಸಹಯೋಗದೊಂದಿಗೆ ಟೆಕ್ನೋ ವೀಕ್ ಕಾರ್ಯಕ್ರಮದ ಪ್ರಯುಕ್ತ ’ಕರಾವಳಿ ವಲಯದ ನಿರ್ವಹಣೆ ಮತ್ತು ಸಿಮೆಂಟ್ಸ್ ತಂತ್ರಜ್ಙಾನದಲ್ಲಿ ಇತ್ತೀಚಿನ ಬೆಳವಣಿಗೆ’ ಎಂಬ ವಿಷಯದ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅಜಿತ್ ಹೆಬ್ಬಾರ್ ಮತ್ತು ರಾಂಮ್ಕೋ ಸಿಮೆಂಟ್ಸ್‌ನ ಸಹಾಯಕ ಮುಖ್ಯ ವ್ಯವಸ್ಥಾಪಕರಾದ ಸೂರಜ್ ಕುಮಾರ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

ಎಸಿಸಿಐ ಬೆಳ್ತಂಗಡಿಯ ಕಾರ್ಯದರ್ಶಿ ಶ್ರೀ. ವಿದ್ಯಾಕುಮಾರ್, ಎಸಿಸಿಐ ಮಂಗಳೂರಿನ ಸದಸ್ಯ ಶ್ರೀ. ಸುಬ್ರಹ್ಮಣ್ಯ ಪ್ರಭು, ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಮುಖ್ಯಸ್ಧರಾದ ಡಾ. ಕೃಷ್ಣಪ್ರಸಾದ್ ಸ್ವಾಗತಿಸಿದರು, ಡಾ. ರವೀಶ್ ಕಾರ್ಯಕ್ರಮ ಸಂಯೋಜಿಸಿದ್ದರು.

 

LEAVE A REPLY

Please enter your comment!
Please enter your name here