ತೋಟತ್ತಾಡಿ: ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರ ಮನೆಗೆ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ

0

ತೋಟತ್ತಾಡಿ:  ಕಳೆದ ಒಂದು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ,  ಒಂದು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ ತೋಟತ್ತಾಡಿ ಅಕೋತ್ಯಾರ್ ನಿವಾಸಿ ಚಂದ್ರಶೇಖರ ಮನೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅ.6 ರಂದು ಭೇಟಿ ಮನೆಯವರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿ ಪ್ರತಿನಿಧಿಯೊಂದಿಗೆ ಮಾತನಾಡಿ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು, ಮನೆಯವರಿಗೆ ನ್ಯಾಯ ಒದಗಿಸಬೇಕು ಬಂಧಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಘಟನೆಯ ವಿವರ:

ಚಂದ್ರ ಶೇಖರ ಸೇರಿದಂತೆ ಎಂಟು ಜನ ಸೇರಿ ಶಬರಿ ಸ್ವಸಹಾಯ ಸಂಘ ಮಾಡಿದ್ದು ಉಜಿರೆಯ ಖಾಸಗಿ ಬ್ಯಾಂಕಿನಿಂದ ರೂ.4 ಲಕ್ಷ ಸಾಲ ಪಡೆದಿದ್ದರು. ಈ ಹಣವನ್ನು ಎಂಟು ಜನ ಸದಸ್ಯರು ಹಂಚಿಕೊಂಡಿದ್ದು ಚಂದ್ರಶೇಖರನ ಹಣವನ್ನು ಸದಸ್ಯ ಯೋಗೀಶ ಎಂಬಾತ ಪಡೆದುಕೊಂಡಿದ್ದ,  ಸ್ವಸಹಾಯ ಸಂಘದ ಹೆಸರಿನಲ್ಲಿ ಸಾಲ ಪಡೆದು ಸಂಘದ ಸದಸ್ಯ ಸಾಲ ಕಟ್ಟದೆ ಇದ್ದುದನ್ನು ಪ್ರಶ್ನಿಸಿದ ಯುವಕನಿಗೆ ತಂಡದ ಸದಸ್ಯರು ಬೆದರಿಕೆ ಹಾಕಿದ್ದು ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಯತ್ನಿಸಿದ ಎಂದು ಆತನ‌ ತಾಯಿ ಪುಷ್ಪಾವತಿ ಧಮ೯ಸ್ಥಳ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.

ಚಂದ್ರಶೇಖರ ದೂರವಾಣಿ ಕರೆ ಮಾಡಿ ಹಣ ಕಟ್ಟದಿರುವ ಬಗ್ಗೆ ಕೇಳಿದ್ದು ಈ ಕಾರಣಕ್ಕಾಗಿ ಆ. 25ರಂದು ನೆರಿಯದಲ್ಲಿ ಸ್ವ ಸಹಾಯ ಸಂಘದ ಸದಸ್ಯರುಗಳಾದ ಸಚಿನ್, ಯೋಗೀಶ್,ನಾರಾಯಣ ಹಾಗೂ ಸುದರ್ಶನ ಎಂಬವರು ಚಂದ್ರಶೇಖರನನ್ನು ತಡೆದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ.ಇದರಿಂದ ಮನನೊಂದು ಚಂದ್ರ ಶೇಖರ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆತನ ತಾಯಿ ನೀಡಿದ ದೂರಿನಲ್ಲಿ ಅಪಾದಿಸಿದ್ದರು.
ಮಂಗಳೂರಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಒಂದು ವಾರದ ಹಿಂದೆ ಸಾವನ್ನಪಿದ್ದರು.

ಧರ್ಮಸ್ಥಳ ಠಾಣೆಯಲ್ಲಿ ಆರೋಪಿಗಳು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here