ಮುಂಡಾಜೆ : ಸತ್ಯನಪಲ್ಕೆ ನಿವಾಸಿ ಬಾಲಕೃಷ್ಣ ನಾಯ್ಕ್ ಪಡೀಲ್ ಹೃದಯಾಘಾತದಿಂದ ನಿಧನ‌

0

ಮುಂಡಾಜೆ: ಮುಂಡಾಜೆ ಗ್ರಾಮದ ಸತ್ಯನ ಪಲ್ಕೆ ಒಂಜರಬೈಲು ನಿವಾಸಿ ಬಾಲಕೃಷ್ಣ ನಾಯ್ಕ್ ಪಡೀಲ್(46) ಅವರು ಅ.7 ರಂದು ಹೃದಯಾಘಾತದಿಂದ ನಿಧನ‌ರಾಗಿದ್ದಾರೆ.

ಮನೆಯಲ್ಲಿ ಹೃದಯಾಘಾತ ವಾದ ವೇಳೆ ಉಜಿರೆ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಅವರು‌ ಧರ್ಮಸ್ಥಳದ ಸಹ್ಯಾದ್ರಿ ವಸತಿಗೃಹವೊಂದರ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಧರ್ಮಸ್ಥಳದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರು ಪತ್ನಿ, ಓರ್ವ ಪುತ್ರ, ಓರ್ವ ಪತ್ರಿ ಹಾಗೂ ತಾಯಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here