ಉಜಿರೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ದ ಇಪ್ಪತ್ತಾರು, ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೆಯ ಪದವಿ ಪ್ರದಾನ ಸಮಾರಂಭ

0

ಧರ್ಮಸ್ಥಳ: ಉಜಿರೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ದ ಇಪ್ಪತ್ತಾರು, ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೆಯ ಪದವಿ ಪ್ರದಾನ ಸಮಾರಂಭವು ಧರ್ಮಸ್ಥಳ ಅಮೃತ ವರ್ಷಿಣಿ  ಸಭಾಭವನದಲ್ಲಿ ಅ.8 ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸಂಸದರು ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.

ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶಿಕ್ಷಣಾಥಿ೯ಗಳಿಗೆ ಪದವಿ ಪ್ರದಾನ ಮಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾ.ಗಾಂ.ಆ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಡಾ|ಎಂ.ಕೆ ರಮೇಶ್, ಶಾಸಕ ಹರೀಶ್ ಪೂಂಜ, ಶ್ರೀ.ಧ.ಮಂ ಶಿಕ್ಷಣ ಸಂಸ್ಥೆ ಯ  ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಜಿರೆ ಶ್ರೀ.ಧ.ಮಂ ಶಿಕ್ಷಣ ಸಂಸ್ತೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.

ಉಜಿರೆ ಶ್ರೀ.ಧ.ಮಂ.ಪ್ರ & ಯೋ.ಕಾಲೇಜು ಪ್ರಾಂಶುಪಾಲರು ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜೋಸ್ನಾ ಕಾಯ೯ಕ್ರಮ ನಿರೂಪಿಸಿದರು.ಡಾ. ಸುಜೀತ್ ಧನ್ಯವಾದವಿತ್ತರು.

 

LEAVE A REPLY

Please enter your comment!
Please enter your name here