ಉಜಿರೆ:  ಉಜಿರೆಯಲ್ಲಿ ಈಶ ಕಲಾ ಪ್ರತಿಷ್ಠಾನ ನೃತ್ಯ ಸಂಸ್ಥೆಯ ಶಾಖೆ ಉದ್ಘಾಟನೆ

0

ಉಜಿರೆ:  ಈಶ ಕಲಾ ಪ್ರತಿಷ್ಟಾನ’ ನೃತ್ಯ ಸಂಸ್ಥೆ ಬೆಳಾಲು ಇದರ ಮೊದಲ ಶಾಖೆ ಉಜಿರೆಯ ಪ್ರೇರಣಾ ಸಭಾಂಗಣದಲ್ಲಿ ಅ.5 ರಂದು ವಿಜಯದಶಮಿಯಂದು ಶುಭಾರಂಭಗೊಂಡಿತು.

ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ  ಪುಷ್ಪಾವತಿ ಆರ್. ಶೆಟ್ಟಿಯವರು ದೀಪ ಬೆಳಗುವುದರ ಮೂಲಕ ನೃತ್ಯ ತರಗತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಉಜಿರೆ ಪಂಚಾಯತ್ ನ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಉಪಸ್ಥಿತರಿದ್ದು ಸಂಸ್ಕಾರ ಬೆಳೆಸುವ ಇಂತಹ ಕಲೆಗಳು ಪ್ರಸ್ತುತ ಅನಿವಾರ್ಯ ವೆಂದರು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ಕವಿತಾ ಉಮೇಶ್ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಉಮೇಶ್ ಜಿ. ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ಪ್ರಾರ್ಥನ ಹಾಗೂ ಕೃಪಾ ಪ್ರಾರ್ಥಿಸಿದರು.
ವಿದ್ಯಾರ್ಥಿನಿ ಕುಮಾರಿ ಕೃತಿ ಮಾಯಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ‘ನಟರಾಜ ಪೂಜೆ ಯೊಂದಿಗೆ
ನೃತ್ಯ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ‘ಗೆಜ್ಜೆಪೂಜೆ ‘ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬಳಗ ಹಾಗೂ ಹೆತ್ತವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here