ಮಡಂತ್ಯಾರು : ಶ್ರೀದುರ್ಗಾ ಕಾಂಪ್ಲೆಕ್ಸ್ ಕಲಾ ಸಭಾಂಗಣ ಉದ್ಘಾಟನೆ

0

ಮಡಂತ್ಯಾರು : ಶ್ರೀದುರ್ಗಾ ಕಲಾ ಕಾಂಪ್ಲೆಕ್ಸ್ ಕಲಾ ಸಭಾಂಗಣ (ಆಶೀರ್ವಾದ್ ಹಾಲ್) ಉದ್ಘಾಟನಾ ಸಮಾರಂಭ ಅ.9 ರಂದು ಜರುಗಿತು.

ಶ್ರೀ ದುರ್ಗಾ ಕಾಂಪ್ಲೆಕ್ಸ್ ಕಲಾ ಸಭಾಂಗಣ (ಆಶೀರ್ವಾದ ಹಾಲ್)ನ್ನು ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೇಜಾವರ ಶ್ರೀ ಶ್ರೀಧರ ರಾವ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ ಪ್ರಾಮಾಣಿಕತೆ, ಧರ್ಮ ಸಾಧನೆಯ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಉತ್ತಮ ಭಾಂದವ್ಯ ದಿಂದ ಸಮಾಜದಲ್ಲಿ ಹೆಸರು ಮತ್ತು ಜನರಲ್ಲಿ ವಿಶ್ವಾಸಾರ್ಹರಾಗಲು ಸಾಧ್ಯ. ಆತ್ಮವಿಶ್ವಾಸದಿಂದ ಮುನ್ನಡೆದಾಗ ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಾಧ್ಯ.ಇಲ್ಲಿಯ ಜನರು ಎಲ್ಲಾ ರೀತಿಯಲ್ಲಿ ಸಹಕರಿಸುತ್ತಾರೆ ಎಂದು ಹೇಳಿ ಆಶೀರ್ವಾಚನ ನೀಡಿದರು.

ಮಾಲಾಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಬೇಬಿ ಸುಜಾನ್ನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಡಂತ್ಯಾರು ಆಶಾ ದೀಪ ಧರ್ಮ ಗುರುಗಳಾದ ಫಾ|ಎಲಿಯನ್ ಡಿ.ಸೋಜಾ, ಮಂಗಳೂರು ಪಡಿಲ್ ಆತ್ಮ ಶಕ್ತಿ ಸಹಕಾರ ಅಧ್ಯಕ್ಷ “ಸಹಕಾರ ರತ್ನ” ಚಿತ್ತ ರಂಜನ್ ಬೋಳಾರ್, ಪುಂಜಲಕಟ್ಟೆ ಆರಕ್ಷಕ ಠಾಣೆ ಪಿ.ಎಸ್.ಐ ಜಾನಕಿ ಗೌಡ, ಮಡಂತ್ಯಾರು ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ,ವಲಯ ಅರಣ್ಯಧಿಕಾರಿ ಆರ್.ಎಫ್.ಒ.ಉಲ್ಲಾಸ್, ಮಡಂತ್ಯಾರು ಮೆಸ್ಕಾಂ ಕಿರಿಯ ಇಂಜಿನಿಯರ್‌ ಸಂತೋಷ ನಾಯಕ್, ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಬ್ದುಲ್ ರಹಿಮಾನ್ ಪಡ್ಫು,ಮಾಲಾಡಿ ಗ್ರಾಮ ಪಂಚಾಯತು ಉಪಾಧ್ಯಕ್ಷ ದಿನೇಶ್ ಕರ್ಕೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸ್ಥಳೀಯ ಗ್ರಾಮ ಪಂಚಾಯತು ಸದಸ್ಯರು, ಉದ್ಯಮಿಗಳು, ವರ್ತಕರು, ಹಿತೈಷಿಗಳು ಹಾಗೂ ಬಂಧು ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸಂಸ್ಥೆಯ ಮಾಲೀಕರಾದ ಎಮ್.ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಕಲಾವತಿ ತಿಮ್ಮಪ್ಪ ಗೌಡ ಹಾಗೂ ಮಕ್ಕಳು ಸ್ವಾಗತಿಸಿ,ಸತ್ಕರಿಸಿದರು.

ಈ ಸಂದರ್ಭದಲ್ಲಿ ಬಡತನ ರೇಖೆಯಲ್ಲಿರುವ 4 ಕುಟುಂಬದ ಸದಸ್ಯರಿಗೆ ಸ್ಟಾರ್ ಹೆಲ್ತ್ ಜೀವ ವಿಮಾ ಕಂಪನಿಯ ಜೀವ ವಿಮೆ ಪಾಲಿಸಿಯನ್ನು ಮಾಲೀಕರ ವತಿಯಿಂದ ಹಸ್ತಾಂತರ ಮಾಡಿದರು.

ಈ ಹಿಂದೆ ಮಾಲೀಕತ್ವ ಹೊಂದಿದ್ದ ಶ್ರೀಮತಿ ಜೆಸಿಂತಾ ಪ್ರೇಂಕ್ ರವರನ್ನು ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ಗೌರವಿಸಿದರು.

LEAVE A REPLY

Please enter your comment!
Please enter your name here