ಬೆಳಾಲು ಚಿತ್ತಾರ ಯುವಶಕ್ತಿ ಬಳಗದ ವತಿಯಿಂದ , ಸಾರ್ವಜನಿಕ ಶ್ರೀ ಶಾರದ ಪೂಜೋತ್ಸವ ಹಾಗೂ ಕ್ರೀಡಾಕೂಟ

0

ಬೆಳಾಲು : ಚಿತ್ತಾರ ಯುವಶಕ್ತಿ ಗೆಳೆಯರ ಬಳಗ ಪೆರಿಯಡ್ಕ (ಬಿ)ಬೆಳಾಲು ಇವರ ವತಿಯಿಂದ ಆರನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಹಾಗೂ ಕ್ರೀಡಾಕೂಟ ಅ. 5 ರಂದು ಪೆರಿಯಡ್ಕ (ಬಿ )ಸ.ಕಿ.ಪ್ರಾ ಶಾಲೆಯಲ್ಲಿ ನಡೆಯಿತು.

ಉದ್ಯಮಿ ಜಯಣ್ಣಗೌಡ ಮಿನಂದೇಲು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನೋಟರಿ ವಕೀಲ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು.

ಮುತ್ತೂಟ್ ಪಿನ್ ಕಾರ್ಪ್ ಹಿರಿಯ ವಲಯ ಪ್ರಬಂಧಕ ಉಮೇಶ್ ಗೌಡ ಮಂಜೊತ್ತು, ಪೆರಿಯಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ,ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್ ಮಡಿವಾಳ ಉಪಸ್ಥಿತರಿದ್ದರು. ಬೆಳಿಯಪ್ಪ ಕೆ. ಸ್ವಾಗತಿಸಿ, ದಿನೇಶ್ ವಂದಿಸಿದರು.

ಬಳಿಕ ನಡೆದ ವಿವಿಧ ಕ್ರೀಡಾಕೂಟದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಉತ್ಸಾಹದಿಂದ ಭಾಗಿಯಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಚಿತ್ತಾರ ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಬೆಳಿಯಪ್ಪ ಕೆ. ಅಧ್ಯಕ್ಷತೆ ವಹಿಸಿದ್ದರು. ಬೆಳಾಲು ಗ್ರಾ. ಪಂ. ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ,ಬೆಳಾಲು ಸಹಕಾರ ಸಂಘದ ನಿರ್ದೇಶಕ ದಾಮೋದರ ಗೌಡ ಸುರುಳಿ, ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್, ಶೈಲೇಶ್ ಕುಮಾರ್, ದಿನೇಶ್ ಹಾಗೂ ಸುರೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಊರಿನ ಹಿರಿಯ ನಾಟಿ ವೈದ್ಯೆ ಹಾಗೂ ಪ್ರಸೂತಿ ತಜ್ಞರನ್ನು ಗೌರವಿಸಲಾಯಿತು. ಸೀತಾಲಕ್ಷ್ಮಿ ಸ್ವಾಗತಿಸಿ ದಿನೇಶ್ ವಂದಿಸಿದರು ಗಿರೀಶ್ ಗೌಡ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here