ಅಳದಂಗಡಿ ಘಟಕದ ಸ್ವಯಂಸೇವಕರಿಂದ ಬರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅಡಿಕೆ ಗಿಡಗಳ ನಾಟಿ

0

ಗುರುವಾಯನಕೆರೆ: ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಅಳದಂಗಡಿ ಘಟಕದ ಸ್ವಯಂಸೇವಕರು ಬರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅ.9ರಂದು  ಅಡಿಕೆ ಗಿಡಗಳನ್ನು ನಾಟಿ ಮಾಡಿ ಕೊಟ್ಟರು.

ದೇವಸ್ಥಾನದ ಆಡಳಿತ ಮಂಡಳಿಯ ಮನವಿಯ ಮೇರೆಗೆ ಯೋಜನಾಧಿಕಾರಿಗಳ ಒಪ್ಪಿಗೆಯನ್ನು ಪಡೆದು 450 ಅಡಿಕೆ ಗಿಡಗಳನ್ನು ನಾಟಿ ಮಾಡಿಕೊಡಲಾಯಿತು. ದೇವಳದ ಅರ್ಚಕರಾದ ಶ್ರೀ ಭಾರ್ಗವರವರು ದೇವತಾ ಪ್ರಾರ್ಥನೆಯ ಮೂಲಕ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ನಿಗದಿಪಡಿಸಿದಂತೆ ಸಮಯಕ್ಕೆ ಸರಿಯಾಗಿ  ಪ್ರಾರಂಭವಾಯಿತು.  ಸುಮಾರು 30 ಸ್ವಯಂಸೇವಕರು ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ  ಜಯವಂತ ಪಟಗಾರರ ಉಪಸ್ಥಿತಿಯಲ್ಲಿ ಗುರುವಾಯನಕೆರೆ ಯೋಜನಾಧಿಕಾರಿಗಳಾದ  ಯಶವಂತ್ ಅವರ ಮಾರ್ಗದರ್ಶನದಲ್ಲಿ ಗಿಡ ನಾಟಿ ಕಾರ್ಯಕ್ರಮ ಅಚ್ಚುಗಟ್ಟಾಗಿ ನೆರವೇರಿತು.

ಗುರುವಾಯನಕೆರೆ ಯೋಜನಾಧಿಕಾರಿಗಳಾದ ಯಶವಂತ್  ಅವರು ಹೊಸತಾಗಿ ಸೇರ್ಪಡೆಗೊಂಡ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಿಸಿದರು. ದೇವಸ್ಥಾನದ ಆಡಳಿತ ಮುಖ್ಯಸ್ಥರಾದ  ಸದಾನಂದ ಸಹಸ್ರಬುದ್ಯೆ ಹಾಗೂ ಊರಿನ ನಾಗರಿಕರು ಪಿಲ್ಯ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸ್ವಯಂಸೇವಕರ ಸೇವೆಯನ್ನು ಗಮನಿಸಿ ಸ್ವಯಂ ಪ್ರೇರಿತರಾಗಿ ಸ್ಥಳೀಯರು ಗಿಡ ನಡುವಲ್ಲಿ ಸಹಕರಿಸಿದರು.  ಯಶವಂತ ರವರು ತಮ್ಮ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಸ್ವಯಂ ಸೇವಕರೊಂದಿಗೆ ಗಿಡ ನಾಟಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಯಂಸೇವಕರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

ವಲಯ ಮೇಲ್ವಿಚಾರಕಿ.  ಸುಮಂಗಲ ಹಾಗೂ ಪಿಲ್ಯ ಒಕ್ಕೂಟದ ಸೇವಾ ಪ್ರತಿನಿಧಿ  ಹರಿಣಾಕ್ಷಿ ಅವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ವಯಂ ಸೇವಕರನ್ನು ಪ್ರೋತ್ಸಾಹಿಸಿದರು.

ಸ್ವಯಂ ಸೇವಕರ ಈ ಕಾರ್ಯ ಊರವರ ಮೆಚ್ಚುಗೆಗೆ ಪಾತ್ರವಾಯಿತು.  ದೇವಳದ ವತಿಯಿಂದ ಕೃತಜ್ಞತಾಪೂರ್ವಕವಾಗಿ ದೇವರ ಗಂಧ ಪ್ರಸಾದವನ್ನು ನೀಡಿದರು.
ಗಿಡ ನಾಟಿಗೆ ಬೇಕಾದ ಅಡಿಕೆ ಸಸಿಗಳನ್ನು ಕ್ಷೇತ್ರ ಧರ್ಮಸ್ಥಳದ ಸಿದ್ಧವನ ನರ್ಸರಿ ಅವರು ರಿಯಾಯಿತಿ ದರದಲ್ಲಿ ಒದಗಿಸಿದ್ದಾರೆ.

LEAVE A REPLY

Please enter your comment!
Please enter your name here