ಪದ್ಮುಂಜದಲ್ಲಿ ಸಂಭ್ರಮದ ಈದ್ ಮೀಲಾದ್

0


ಪದ್ಮುಂಜ:  ಇಲ್ಲಿಯ ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ ಮಾಡಲಾಯಿತು.

ಅ 8 ರಂದು ರಾತ್ರಿ ಮದರಸ ವಿದ್ಯಾರ್ಥಿಗಳಿಂದ ಹಾಡು ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅ 9 ರಂದು ಪೂರ್ವಾಹ್ನ ಮಸೀದಿಯ ಮುಖ್ಯ ಗುರುಗಳಾದ ಹನೀಫ್ ಬಾ ಅಹ್ಸನಿಯವರ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಸಿ ಪದ್ಮುಂಜ ಪೇಟೆಯ ತನಕ ಮೆರವಣಿಗೆ ನಡೆಸಲಾಯ್ತು.  ಪದ್ಮುಂಜ ಪೇಟೆ ಯಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಘಾಟನೆ  ಎಸ್ ವೈಎಸ್ ರಾಜ್ಯ ಕಾರ್ಯದರ್ಶಿ ಕಾಸಿಂ ಪದ್ಮುಂಜ  ನೆರವೇರಿಸಿದರು.

ವೇದಿಕೆಯಲ್ಲಿ ಜಮಾತ್ ಅಧ್ಯಕ್ಷ ಯೂಸುಫ್ ಅಂತರ,  ಎಸ್ ವೈ ಅಧ್ಯಕ್ಷ ಅಬೂಬಕ್ಕರ್ ಪದ್ಮುಂಜ,  ಕಾರ್ಯದರ್ಶಿ ಸುಲೈಮಾನ್ ಪದ್ಮುಂಜ,  ಎಸ್ ಎಸ್ ಎಫ್ ಅಧ್ಯಕ್ಷ ನವಾಝ್ ಅಂತರ,  ಮದರಸದ ಸಹ ಅಧ್ಯಾಪಕರ ರಫೀಖ್ ಮದನಿ,  ಬಾಬು ಗೌಡ ಪೊಯ್ಯ, ಪ್ರೇಮನಾಥ ಶೆಟ್ಟಿ ಮಲೆಂಗಲ್ಲು, ಮಾಜಿ ಅಧ್ಯಕ್ಷರುಗಳಾದ ಅಬೂಬಕ್ಕರ್ ಹಾಜಿ, ಹಾಮದ್ ಪರಕ್ಕೆದು , ಸಿಧ್ಧಿಖ್ ಕೊರಿಂಜ,  ಜಮಾತ್ ಕೋಶಾಧಿಕಾರಿ ರಫೀಖ್ ನನ್ಯ ಸೇರಿದಂತೆ ಜಮಾತಿನ ಎಸ್ ವೈ ಎಸ್ ಎಸ್ ಎಸ್ ಎಫ್. ಎಸ್ ಬಿ ಎಸ್. ನೇತಾರರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮೆರವಣಿಗೆಯುದ್ದಕ್ಕೂ ಮದರಸ ವಿದ್ಯಾರ್ಥಿಗಳ ದಪ್ಪು ಪ್ರದರ್ಶನ ಮನರಂಜನೆ ನೀಡಿತ್ತು. ಎಸ್ ಎಸ್ ಎಫ್ ಜಿಲ್ಲಾ ಸದಸ್ಯ ಅಬ್ದುರ್ರಹ್ಮಾನ್ ಸ್ವಾಗತಿಸಿದರು ಎಸ್ ಎಸ್ ಎಫ್ ಸೆಕ್ಟರ್ ಕಾರ್ಯದರ್ಶಿ ನಿಝಾಮುದ್ದೀನ್ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here