ಉಜಿರೆ ಎಸ್‌.ಡಿ.ಎಂ. ಸೆಕೆಂಡರಿ ಶಾಲೆಗೆ ನೂತನ ಮುಖ್ಯೋಪಾಧ್ಯಾಯರಾಗಿ ಪದ್ಮರಾಜ್

0


ಉಜಿರೆ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಸದಾಶಿವ ಪೂಜಾರಿಯವರು ವಯೋ ನಿವೃತ್ತಿ ಹೊಂದಿದ್ದು ಇದೇ ಶಾಲೆಯಲ್ಲಿ 28 ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪದ್ಮರಾಜ್ ಇವರನ್ನು ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರನ್ನಾಗಿ ನಿಯುಕ್ತಿಗೊಳಿಸಿದೆ.

ಮೂಲತ ಶ್ರವಣಬೆಳಗೊಳದ ಇವರು ಬಿ.ಎಸ್ಸಿ ಬಿ.ಎಡ್ ಪರಿಸರ ವಿಜ್ಞಾನ ದಲ್ಲಿ , ಎಂ.ಎಡ್  ಪಡೆದಿರುತ್ತಾರೆ. ಎನ್.ಸಿ.ಸಿ ಅಧಿಕಾರಿಯಾಗಿ, ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ, ಕ್ವಿಜ್ ಮಾಸ್ಟರ್, ಯೋಗಪಟು ಜೊತೆಗೆ ಅಂಚೆ ಚೀಟಿ, ನಾಣ್ಯ, ನೋಟುಗಳ ಸಂಗ್ರಹಕರಾಗಿ, ಗಾರ್ಡನಿಂಗ್‌ ಆಸಕ್ತಿಯನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here