ಮುಂಡಾಜೆಯಲ್ಲಿ ಪ್ರವಾದಿ ಸಂದೇಶ ಜಾಥಾ, ಮೀಲಾದ್ ಸಮಾವೇಶ

0

ಮುಂಡಾಜೆ: ಮುಂಡಾಜೆ ಮಸ್ಲಕು ತ್ತ‌ಅಲೀಮಿ ಸ್ಸುನ್ನಿಯ್ಯ ಹಾಗೂ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಜಂಟಿ ಆಶ್ರಯದಲ್ಲಿ ಎಸ್‌ಬಿಎಸ್, ಎಸ್ಸೆಸ್ಸೆಫ್, ಎಸ್‌ವೈಎಸ್ ಮತ್ತು ಕೆಎಮ್‌ಜೆಸಿ ಹಾಗೂ ದಾನಿಗಳ ಸಹಕಾರದೊಂದಿಗೆ ಮೀಲಾದ್ ಸಂದೇಶ ಜಾಥಾ ಮತ್ತು ಇಶ್ಕೇ ರಸೂಲ್ ಸಮಾವೇಶ ಅ.9 ರಂದು ಜಮಲುಲ್ಲೈಲಿ ಕ್ಯಾಂಪಸ್ ನಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಮುಹಮ್ಮದ್ ಬಶೀರ್ ನೆಕ್ಕರೆ ವಹಿಸಿದ್ದರು. ಸಯ್ಯಿದ್ ಕಾಜೂರು ತಂಙಳ್ ಕಾರ್ಯಕ್ರಮಕ್ಕೆ ಪ್ರಮುಖ ನೇತೃತ್ವ ನೀಡಿದರು.

ಜಮಾಅತ್ ನ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳಾದ ಹಾಜಬ್ಬ ಸಿ, ಉಸ್ಮಾನ್ ಎಂ.ಕೆ, ಅಬ್ಬಾಸ್ ಸಿ, ರಶೀದ್ ಜೈ ಭಾರತ್, ಕೆರೀಂ‌ ಕೆ.ಎಸ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಶಬೀರ್ ಬಿಕೆಹೆಚ್, ಮುಹಮ್ಮದ್ ಜೈಭಾರತ್, ಇಬ್ರಾಹಿಂ ದರ್ಕಾಸು, ಮುಝಮ್ಮಿಲ್, ಮುಸ್ತಫಾ ಸ‌ಅದಿ ಕಕ್ಕಿಂಜೆ, ಶಫೀಕ್ ಹಿಮಮಿ ನಿಡಿಗಲ್, ಹನೀಫ್ ಮುಸ್ಲಿಯಾರ್, ಹಮೀದ್ ಬಿ.ಎನ್, ಹಮೀದ್ ನೆಕ್ಕರೆ, ಕಾಜೂರು ಎಸ್ ವೈ ಎಸ್ ಅಧ್ಯಕ್ಷ ಕೆ.ಎಮ್ ಅಬೂಬಕ್ಕರ್, ಹಮೀದ್ ದರ್ಖಾಸು, ಕೆರೀಮ್ ಕುರುಡ್ಯ, ಅಬೂಬಕ್ಕರ್ ಕೂಳೂರು, ಅಬ್ದುಲ್ ಖಾದರ್ ಮುಸ್ಲಿಯಾರ್, ಸಯ್ಯಿದಾಲಿ ಹಾಜಿ, ಪುತ್ತಾಕ ಕೂಳೂರು, ಇಬ್ರಾಹಿಂ ಕನ್ಯಾಡಿ, ಅಯೂಬ್ ಆಲಿಕುಂಞಿ, ಉಸ್ಮಾನ್ ಲಿಚ್ಚೀಸ್ ಮೊದಲಾದವರು ಉಪಸ್ಥಿತರಿದ್ದರು.

ಹೆಲ್ಪ್ ಫಾರ್ ಸೋಮಂತಡ್ಕ ತಂಡದವರು ಜಾಥಾ ದಲ್ಲಿ ತಂಪು ಪಾನೀಯ ಒದಗಿಸಿಕೊಟ್ಟರು. ಮಸ್ಜಿದ್ ಮುಖ್ಯ ಗುರುಗಳಾದ ಉನೈಸ್ ಸಖಾಫಿ ನರಿಮೊಗರು ಉದ್ಘಾಟನೆ ನೆರವೇರಿಸಿದರು. ಸದರ್ ಅಬ್ದುಲ್ ಜಲೀಲ್ ಸಖಾಫಿ ಅವರ ನೇತೃತ್ವದಲ್ಲಿ ಮದರಸ ವಿದ್ಯಾರ್ಥಿಗಳಿಂದ ಹಾಡು, ಭಾಷಣ ಸ್ಪರ್ಧೆ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ಸೋಮಂತಡ್ಕ ಪೇಟೆಯವರೆಗೆ ಪ್ರವಾದಿ ಸಂದೇಶ ಸಾರುವ ಸೌಹಾರ್ದತೆಯ ಮೀಲಾದ್ ವಾಹನ ಜಾಥಾ ಸಂಪನ್ನಗೊಂಡಿತು.

ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ, 2021 ನೇ ಸಾಲಿನ ಪ್ರತಿಭಾ ಪುರಸ್ಕಾರ ನಡೆಯಿತು. ಕಾರ್ಯಕ್ರಮದ ಕೊನೆಗೆ ಅನ್ನದಾನ ನಡೆಯಿತು.

LEAVE A REPLY

Please enter your comment!
Please enter your name here