ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಮೀಲಾದ್ ಕಾರ್ಯಕ್ರಮ; ಜಾಥಾ

0

ಬೆಳ್ತಂಗಡಿ:  ಬದ್ರಿಯಾ ಜುಮ್ಮಾ ಮಸ್ಜಿದ್ ನಿಡಿಗಲ್ ಕಲ್ಮಂಜ ಮತ್ತು ಹಯಾತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಜಂಟಿ ಸಹಭಾಗಿತ್ವದಲ್ಲಿ ಜಮಾಅತ್ ಬಾಂಧವರ ಸಹಕಾರದೊಂದಿಗೆ ಎರಡು ದಿನಗಳ ಮೀಲಾದ್ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು.

ಜಮಾಅತ್ ಅಧ್ಯಕ್ಷ ಮುಹಮ್ಮದ್ ಮುಜೀಬ್ ವಹಿಸಿದ್ದರು.

ಖತೀಬ್ ಉಸ್ತಾದ್ ಮುಸ್ಯಫಾ ಸ‌ಅದಿ ಕಕ್ಕಿಂಜೆ, ಸದರ್ ಶಫೀಕ್ ಹಿಮಮಿ, ಪ್ರಮುಖರಾದ ಬಿಎನ್ ಹಮೀದ್, ರಫೀಕ್ ಎನ್.ಎಂ, ಹನೀಫ್ ಮುಸ್ಲಿಯಾರ್, ಶೆರೀಫ್, ಹಮೀದ್, ಇಸ್ಮಾಯಿಲ್, ಸಹಿತ ಎಲ್ಲ ಪದಾಧಿಕಾರಿಗಳು, ಯಂಗ್ ಮೆನ್ಸ್ ಸಂಘಟನೆಯ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು. ಮುಂಡಾಜೆಯಿಂದ ಹಾಜಬ್ಬ ಸಿ, ಬಶೀರ್ ನೆಕ್ಕರೆ, ಹಮೀದ್ ನೆಕ್ಕರೆ, ಅಬ್ಬಾಸ್ ಸಿ, ಇಸ್ಮಾಯಿಲ್ ದರ್ಖಾಸು, ಅಬೂಬಕ್ಕರ್ ಹಾಜಿ ಸಂಸೆ, ಅಯೂಬ್ ಆಲಿಕುಂಞಿ, ಅಶ್ರಫ್ ಆಲಿಕುಂಞಿ, ಕೆರೀಮ್ ಕೆ.ಎಸ್ ಮೊದಲಾದವರು ಭಾಗಿಯಾಗಿದ್ದರು. ನಿಡಿಗಲ್ ಜಮಾಅತ್ ನ ಏಳಿಗೆಯಲ್ಲಿ ಶ್ರಮಿಸಿದ್ದ ಅಬ್ದುಲ್ಲ ಅವರನ್ನು ಗೌರವಿಸಲಾಯಿತು.

ಅ.8 ರಂದು ರಾತ್ರಿ ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆದು ಬಹುಮಾನ ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಪುರಸ್ಕರಿಸಲಾಯಿತು. ಅ.9 ರಂದು ಮೀಲಾದ್ ಸಂದೇಶ ಕಾಲ್ನಡಿಗೆ ಜಾಥಾ ಆದರ್ಶ ನಗರ ಮತ್ತು ನಿಡಿಗಲ್ ಮುಖ್ಯ ಪಟ್ಟಣದಲ್ಲಿ ನಡೆಸಲಾಯಿತು. ಸಾಂಪ್ರದಾಯಿಕ ದಫ್ಫ್ ಮೆರವಣಿಗೆಯ ಅಂದ ಹೆಚ್ಚಿಸಿತು. ಎರಡೂ ದಿನಗಳಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here