ಬೆಳ್ತಂಗಡಿ: ಕನ್ಯಾಡಿ ಶ್ರೀಗಳಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೆಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 45 ನೇ ವರ್ಷದ ಜೆಸಿ ಸಪ್ತಾಹ -2022 ರಮ್ಯಾ ಹೊಸತನದ ಹೊಂಬೆಳೆಕು ಇದರ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಸಾದ್ ಬಿ.ಎಸ್.ಪೂರ್ವಾಧ್ಯಕ್ಷ ಚಿದಾನಂದ ಇಡ್ಯ,ಕಾರ್ಯಕ್ರಮ ಸಂಯೋಜಕ ಚಂದ್ರಹಾಸ್ ಬಳಂಜ,ಸದಸ್ಯರಾದ ಗಣೇಶ್ ಬಿ ಶಿರ್ಲಾಲು, ವಿಜಯ್ ನಿಡಿಗಲ್,ಉದಯ ಬಂಗೇರ ನಾವೂರು ಉಪಸ್ಥಿತರಿದ್ದರು.

ಅ. 29 ರಿಂದ ನ .4 ರವರೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ಒಂದು ವಾರಗಳ ಕಾಲ ನಡೆಯುವ ಸಪ್ತಾಹದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಬಾಗವಹಿಸಲಿದ್ದಾರೆ.ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ.

LEAVE A REPLY

Please enter your comment!
Please enter your name here