ಮೂಡುಕೋಡಿ: ಯುವವಾಹಿನಿ ವತಿಯಿಂದ ನಡೆದ ಕೆಸರು ಗದ್ದೆ ಕ್ರೀಡಾ ಕೂಟ ಸಮಾರೋಪ

0

ಮೂಡುಕೋಡಿ: ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಇದರ ನೇತೃತ್ವದಲ್ಲಿ ಯುವವಾಹಿನಿ ವೇಣೂರು ಘಟಕದ ಆಥಿತ್ಯದಲ್ಲಿ ಮೂಡುಕೋಡಿ ನೋನೊಟ್ಟು ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಕೂಟದ ಸಮಾರೋಪ ಮತ್ತು ಬಹುಮಾನ ವಿತರಣೆ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ರವರ ಅಧ್ಯಕ್ಷತೆಯಲ್ಲಿ ಜರಗಿತು.

ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರಧ್ಯಕ್ಷ ಜಯಂತ್ ನಡುಬೈಲು, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಅಧ್ಯಕ್ಷ ಸತ್ಯಜೀತ್ ಸುರತ್ಕಲ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ವೇಣೂರು ವಲಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಪೊಕ್ಕಿ,ಬೆಳ್ತಂಗಡಿಯ ನ್ಯಾಯವಾದಿ ಮನೋಹರ್ ಇಳಂತಿಲ,ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಬಿಕ್ರೊಟ್ಟು,

ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ಸ್ವಾಗತ ಸಮಿತಿ ಅಧ್ಯಕ್ಷ ನಿತೀಶ್ ಎಚ್.ಸಂಚಾಲಕರಾದ  ನವೀನ್ ಪಚ್ಚೆರಿ, ಶಿವಪ್ರಕಾಶ್ ಅಂಬಾಶ್ರೀ ಕೊಕ್ರಾಡಿ,  ಮೂಡುಕೋಡಿ ಶ್ರೀ ಸತೀಶ್ ಪಿ. ಎನ್, ಅರುಣ್ ಕೋಟ್ಯಾನ್, ವೇಣೂರು ಘಟಕದ ಕಾರ್ಯದರ್ಶಿ ಪ್ರಶಾಂತ್ ಪದ್ಯೋಡಿ,  ಕೋಶಾಧಿಕಾರಿ ರಕ್ಷಿತ್‌ ಬಜಿರೆ,  ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕ ಸುಜಿತ್ ಬಜಿರೆ, ಅಕ್ಷಿತ್ ಕಂಬಳದಡ್ಡ,

ಕೇಂದ್ರ ಸಮಿತಿಯ ಕಾರ್ಯದರ್ಶಿ  ಸತೀಶ್‌ ಕಿಲ್ಪಾಡಿ, ಕೋಶಾಧಿಕಾರಿ  ಜಗದೀಶ್ಚಂದ್ರ ಡಿ. ಕೆ. ಕೇಂದ್ರ ಸಮಿತಿಯ ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕ ನವೀನ್ ಪಚ್ಚೇರಿ ಹಾಗೂ ಕೇಂದ್ರ ಸಮಿತಿ ಮಂಗಳೂರು ಮತ್ತು ವೇಣೂರು ಘಟಕದ ಪದಾಧಿಕಾರಿಗಳು  ಸದಸ್ಯರು ಸಹಕರಿಸಿದರು.

 

 

LEAVE A REPLY

Please enter your comment!
Please enter your name here