ಸ. ಹಿ.ಪ್ರ. ಶಾಲೆ ಬಂಗಾಡಿಯಲ್ಲಿ ಶಾಲೆಯ ಮಹತ್ವವನ್ನು ಸಾರುವ ಆಡಿಯೋ ವೀಡಿಯೋ ಬಿಡುಗಡೆ ಕಾರ್ಯಕ್ರಮ

0

ಬಂಗಾಡಿ:  ಸ. ಹಿ.ಪ್ರ. ಶಾಲೆ ಬಂಗಾಡಿಯಲ್ಲಿ ಶಾಲೆಯ ಮಹತ್ವವನ್ನು ಸಾರುವ ಆಡಿಯೋ ವೀಡಿಯೋ ಬಿಡುಗಡೆ ಕಾರ್ಯಕ್ರಮವು ಅ.10 ರಂದು ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪ್ರೇಮಾರವರು ನೆರವೇರಿಸಿದರು.

ಆಡಿಯೋ ವೀಡಿಯೋ ನಿರ್ದೇಶಕರಾದ ವಿಶ್ವನಾಥ ಗೌಡ ಉದ್ದಾರ ಬಂಗಾಡಿ,  ನಿರ್ಮಾಪಕರು ನವೀನ್ ಕುಮಾರ್ ಬಂಗಾಡಿ , ಗಾಯಕರಾದ ಇಸ್ಮಾಯಿಲ್ ಬಂಗಾಡಿ ಹಾಗೂ ಉದ್ಯಮಿ ಸತ್ತಾರ್ ಹುರ್ಲ ಬಂಗಾಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷರಾದ ಅಮಿತಾನಂದ ಹೆಗ್ಡೆ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಗೀತೆಯ ಲೇಖಕ ಶಾಹೀನ್ ಬೆದ್ರಬೆಟ್ಟು ಇವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here