ಧರ್ಮಸ್ಥಳ ಅ.15: ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ 

0


ಧರ್ಮಸ್ಥಳ: ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರಧಾರೆ ಇದರ ಉದ್ಘಾಟನೆಯು ಅ.15 ರಂದು ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ನೆರವೇರಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ, ಕಾರ್ಯದರ್ಶಿಗಳು ಹಾಗೂ ಉಜಿರೆ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಮಧುಕರ ಹೆಬ್ಬಾರ್ ವಹಿಸಲಿದ್ದಾರೆ. ಕಚೇರಿ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ, ಪಶು ಆಹಾರ ಗೋದಾಮು ಉದ್ಘಾಟನೆಯನ್ನು ಮಂಗಳೂರು ದ. ಕ. ಹಾಲು ಒಕ್ಕೂಟದ ಅಧ್ಯಕ್ಷ
ಕೆ. ಪಿ. ಸುಚರಿತ ಶೆಟ್ಟಿ, ನಾಮಫಲಕದ ಉದ್ಘಾಟನೆಯನ್ನು ದ. ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಬಿ. ಜಯರಾಮ ರೈ ಬಳಜ್ಜ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಕ.ಹಾ. ಮಹಾ ಮಂಡಳಿ ನಿರ್ದೇಶಕರು ಕಾಪು ದಿವಾಕರ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಎಲ್. ಎಚ್. ಮಂಜುನಾಥ್,
ದ.ಕ.ಸ.ಹಾ.ಒಕ್ಕೂಟದ ನಿರ್ದೇಶಕರುಗಳಾದ ನಿರಂಜನ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ಕೆ. ನಾರಾಯಣ ಪ್ರಕಾಶ್ ಪಾಣಾಜೆ,  ಸವಿತ ಎನ್, ಶೆಟ್ಟಿ, ದ.ಕ.ಸ.ಹಾ.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ
ಅಶೋಕ, ಭಾಗವಹಿಸಲಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜಯ ಮೋನಪ್ಪ ಗೌಡ, ಶೇಖರಣೆ ಮತ್ತು ತಾಂತ್ರಿಕ ವಿಭಾಗ ವ್ಯವಸ್ಥಾಪಕ ನಿರ್ದೇಶಕರು ಡಾ. ನಿತ್ಯಾನಂದ ಭಕ್ತ, ತ್ರಿವೇಣಿ ರಾವ್‌, ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರು  ತ್ರಿವೇಣಿ ರಾವ್ , ದ.ಕ.ಸ.ಹಾ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರಶೇಖರ್ ಭಟ್, ಬೆಳ್ತಂಗಡಿ ವಿಸ್ತರಣಾಧಿಕಾರಿ ಆದಿತ್ಯ ಸಿ., ಪಶು ವೈದ್ಯ ಡಾ| ಗಣಪತಿ ಬಿ.ಎಂ., ಮೊದಲದವರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here