ಬೆಳಾಲು :ಮಾಯಾ, ಬೆಳಾಲು ಅಂಗನವಾಡಿ ಕಟ್ಟಡಗಳ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗೆ ಶಿಲಾನ್ಯಾಸ

0

ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಾಲು ಮತ್ತು ಮಾಯಾ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಮತ್ತು ಕೊಲ್ಪಾಡಿ ಸ. ಕಿ. ಪ್ರಾ.ಶಾಲಾ ಅಂಗಳಕ್ಕೆ ಇಂಟರ್‌ಲಾಕ್‌ ಅಳವಡಿಕೆ,
ರೂ.4.70 ಲಕ್ಷದಲ್ಲಿ ನಿರ್ಮಾಣ ಗೊಳ್ಳಲಿರುವ ಸುಸಜ್ಜಿತ ಶೌಚಾಲಯ,ರೂ.2.14 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಮುಂಡ್ರೋಟ್ಟು, ಸುರುಳಿ,ಕೋಲೋಡಿ, ಕುಂಡಡ್ಕ ಬೆಳಾಲಿನ ಜಲಜೀವನ್ ಮಿಷನ್ ಕುಡಿಯವ ನೀರಿನ ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮ ಅ.11 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು.

 

ದ. ಕ ಬಳಿಕ ಮಾಯಾ ಸರಕಾರಿ ಉ. ಹಿ. ಪ್ರಾ. ಶಾಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ವಹಿಸಿದ್ದರು.

ಜಿ. ಪ. ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಕೋಟ್ಯಾನ್ , ಸುರೇಂದ್ರ ಗೌಡ, ಕೃಷ್ಣಯ್ಯ ಆಚಾರ್ಯ, ಜಯಂತ ಗೌಡ ವಿದ್ಯಾ ಶ್ರೀನಿವಾಸ್,ಯಶೋದಾ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾ ಅಧಿಕಾರಿ ಪ್ರಿಯಾ ಆಜ್ಞೆಸ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್, ಮಾಯಾ ಮಹಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ,ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಬಿ. ಕುಸುಮಧರ್,ಮಾಯಾ ಶಾಲಾ ಮುಖ್ಯ ಶಿಕ್ಷಕ ವಿಠ್ಠಲ ಎಂ,ಪಿ ಡಿ ಒ ದೀಪಕ್ ರಾಜ್, ಕಾರ್ಯದರ್ಶಿ ಮೋಹನ್ ಬಂಗೇರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ್ ಸಾಲಿಯಾನ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪ್ರಭಾವತಿ, ಸಮಿತಿ ಸದಸ್ಯರು, ಗ್ರಾಮಸ್ಥರು, ಮಕ್ಕಳು, ಹೆತ್ತವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here