ಭರದಿಂದ ಸಾಗುತ್ತಿರುವ ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಗುಡಿ ನಿರ್ಮಾಣದ ಕಾರ್ಯ

0

ಬೆಳ್ತಂಗಡಿ: ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಗುಡಿಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಈ ದಿನ ದೇವಸ್ಥಾನದ ಹಳೆಯ ಕಟ್ಟಡದ ಮೇಲ್ಛಾವಣಿ ತೆರೆವುಗೊಳಿಸುವ ಕಾರ್ಯವನ್ನು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಶ್ರಮದಾನದ ಮೂಲಕ. ನೆರವೇರಿಸಿ ಕೊಟ್ಟರು.

ಗುರುವಾಯನಕೆರೆ ಯೋಜನಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವಲಯ ಮೇಲ್ವಿಚಾರಕಿ ಸುಮಂಗಲ ಅವರ ಉಪಸ್ಥಿತಿಯಲ್ಲಿ ಸೇವಾ ಕಾರ್ಯ ನೆರವೇರಿತು.

ಸುಮಾರು 2000 ಹಂಚುಗಳು ಹಾಗೂ ಒಂದು ಲೋಡು ಮರದ ಪರಿಕರಗಳನ್ನು ಜಾಗ್ರತೆಯಿಂದ ತೆಗೆದು ವ್ಯವಸ್ಥಿತವಾಗಿ ಲಾರಿಯಲ್ಲಿ ಸಾಗಿಸಿ ಸ್ಥಳಾಂತರಿಸಲಾಯಿತು.

ಸೇವಾ ಕಾರ್ಯದಲ್ಲಿ ಪ್ರಕಾಶ್ ಕೊಲ್ಲಂಗೆ, ಯಶೋಧರ ಸುವರ್ಣ, ಜಯಕುಮಾರ್ ಅಶೋಕ್ ಪ್ರವೀಣ್ ಕುದ್ಯಾಡಿ, ಸುರೇಶ್ ಕುಧ್ಯಾಡಿ, ನಾರಾಯಣ ಸಾಲಿಯಾನ್, ರಾಜೇಶ್ ಕುದುರು, ಸುಂದರ, ಪ್ರವೀಣ್ ಪಿಲ್ಯ, ಹರೀಶ್ ಹಾಗೂ ವಲಯ ಸಂಯೋಜಕ ಶ್ರೀಕಾಂತ ಭಾಗವಹಿಸಿದ್ದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|ಶಶಿಧರ ಡೊಂಗ್ರೆ , ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್ ಹಾಗೂ ಸದಸ್ಯ ಸದಾನಂದ ಮಾಳಿಗೆ ಮನೆ ಸಹಕರಿಸಿದರು.

LEAVE A REPLY

Please enter your comment!
Please enter your name here