ಮರೋಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಮರೋಡಿ : ಮರೋಡಿ ಗ್ರಾಮ ಪಂಚಾಯತದ 2022-23ನೇ ಸಾಲಿನ ಗ್ರಾಮ ಸಭೆಯು ಪಂಚಾಯತದ ಅಧ್ಯಕ್ಷ ಪದ್ಮಶ್ರೀ ಜೈನ್ ಇವರ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು.
ಗ್ರಾಮ ಸಭೆಯ ಮಾರ್ಗದರ್ಶಕರಾಗಿ ತೋಟಗರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್‌ರವರು ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ಕೆ. ಜೆ ಯವರು ಸ್ವಾಗತಿಸಿ, ೨೦೨೨-೨೩ನೇ ಸಾಲಿನ ವರದಿ ವಾಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಲಾರಗೋಳಿ- ಅರಸಬೆಟ್ಟು ರಸ್ತೆ ಅಭಿವೃದ್ಧಿ, ಕಚ್ಚಾ ರಸ್ತೆಯಲ್ಲಿ ಮೋರಿ ರಚನೆ, ಹಾರ್ದೋಟ್ಟು ರಸ್ತೆ ಕಾಮಗಾರಿ ಹಾಗೂ ಕೂಕ್ರಬೆಟ್ಟು ಎಂಬಲ್ಲಿ ವಿದ್ಯುತ್ ದುರಸ್ತಿ ಪಡಿಸುವ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿ ಚಂದ್ರಶೇಖರ್‌ರವರು ಗ್ರಾಮ ಸಭೆಯ ಮಹತ್ವ ಮತ್ತು ಗ್ರಾಮದ ಅಭಿವೃದ್ಧಿಯ ಕುರಿತು ತಿಳಿಸಿದರು. ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಪದ್ಮಶ್ರೀ ಜೈನ್ ಅವರು ಮಾತನಾಡಿ, ಗ್ರಾಮಸ್ಥರು ನೀಡಿರುವ ವಿವಿಧ ಕಾಮಗಾರಿಗಳ ಬೇಡಿಕೆಗಳನ್ನು ಹಂತ,ಹಂತವಾಗಿ ಈಡೇರಿಸುವ ಬಗ್ಗೆ ಭರವಸೆ ನೀಡಿದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಯಶೋಧರ ಆಚಾರ್ಯ, ಗ್ರಾಮ ಪಂಚಾಯತದ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here