ಅ.16: ಮೇಲಂತಬೆಟ್ಟು ಯುವಕರಿಗೆ ಮೋಟೋಕ್ರಾಸ್ ಸ್ಪರ್ಧೆ, ಮಹಿಳೆಯರಿಂದ ಮೋಟೋಕ್ರಾಸ್ ಶೊ

0

ಬೆಳ್ತಂಗಡಿ: ಪ್ರತಿವರ್ಷದಂತೆ ಈ ವರ್ಷವೂ ಸಮರಜಿತ್ ಕ್ಲಬ್ ಹಾಗೂ ಮೇಲಂತಬೆಟ್ಟು ಮೋಟೋಕ್ರಾಸ್ ಸಮಿತಿ ಬೆಳ್ತಂಗಡಿ ವತಿಯಿಂದ ಸಮರಜಿತ್ ಟ್ರೋಫಿಯು.ಅ.16ರಂದು ಪಕ್ಕಿದಕಲ ಮೇಲಂತಬೆಟ್ಟು ನಡೆಯಲಿದೆ.

ಓಪನ್ ಕ್ಲಾಸ್ ಯುವಕರಿಗೆ ಮತ್ತು ಬೆಳ್ತಂಗಡಿ ತಾಲೂಕಿಗೆ ಒಳಪಟ್ಟ ಯುವಕರಿಗೆ ಮೋಟೋಕ್ರಾಸ್ ಸ್ಪರ್ಧೆ .ಅಂಗನವಾಡಿ ಮಕ್ಕಳಿಗೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ,  ಸಾರ್ವಜನಿಕ ಮಹಿಳೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆ, ಸಾರ್ವಜನಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಕೆ ಹೊಡೆಯುವ ಸ್ಪರ್ಧೆ, ವಿಶೇಷ ಆಕರ್ಷಣೆಯಾದ ಮಹಿಳೆಯರಿಂದ ಮೋಟೋ ಕ್ರಾಸ್ ಶೋ ನಡೆಯಲಿದೆ.

ಸಂಜೆ  ಉಮೇಶ್ ಮತ್ತು ತಂಡ ವಾಮದಪದವು ಇವರಿಂದ ಸಪ್ತಸ್ವರ ಮೆಲೋಡಿಸ್ ಆರ್ಕೆಸ್ಟ್ರಾ ಮತ್ತು ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯಿಂದ ಡ್ಯಾನ್ಸ್ ನಡೆಯಲಿದೆ. ಎಂದು ಮೋಟೋಕ್ರಾಸ್ ಸಮಿತಿಯ ಅಧ್ಯಕ್ಷರಾದ ಟುವಿತ್ ಸಾಲಿಯಾನ್ ಮತ್ತು ಸಮರಜಿತ್ ಕ್ಲಬ್ ನ ಅಧ್ಯಕ್ಷರಾದ ಸುನಿಲ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here