ಬೆಳಾಲು: ಒಕ್ಕೂಟದ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ತರಬೇತಿಯ ಸಮಾರೋಪ ಸಮಾರಂಭ

0

ಬೆಳಾಲು:   ನಾಗಾಂಬಿಕಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ( ರಿ). ಬೆಳಾಲು ಇಲ್ಲಿ ಒಕ್ಕೂಟದ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆಯ ಮೂರು ಹಂತದ ತರಬೇತಿಯ ಕೊನೆಯ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮವು ಅ.13 ರಂದು ಬೆಳಾಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮಧುರ ಇವರು ವಹಿಸಿದ್ದರು.

ತರಬೇತುದಾರರಾಗಿ ಆಗಮಿಸಿದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಆನಂದ್  ಇವರನ್ನು ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಹರಿಪ್ರಸಾದ್  ಇವರು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಡಿಎಂ ವಾಣಿ  ಇವರು ಲಿಂಗತ್ವ ಹಾಗೂ ಮಹಿಳಾ ಸಮಾನತೆಯ ಬಗ್ಗೆ ತಿಳಿಸಿದರು. ಒಕ್ಕೂಟದ ಪದಾಧಿಕಾರಿ ಶಾಲಿನಿ ಇವರು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ವಲಯ ಮೇಲ್ವಿಚಾರಕರಾದ ಜಯಾನಂದ್ , ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಎಂಬಿಕೆ ಎಲ್ ಸಿ ಆರ್ ಪಿ ಯವರು, ಸಖಿಗಳು ಉಪಸ್ಥಿತರಿದ್ದರು. ಎಂಬಿಕೆ ಹರಿಣಾಕ್ಷಿಯವರು ಅತಿಥಿಗಳನ್ನು ಸ್ವಾಗತಿಸಿ, ಎಲ್ ಸಿ ಆರ್ ಪಿ ವಸಂತಿಯವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here