ವೇಣೂರು: ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ

0

ವೇಣೂರು: ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ, ಗ್ರಾ.ಪಂ. ವೇಣೂರು ಹಾಗೂ ಫಲ್ಗುಣಿ ಸೇವಾ ಸಂಘದ ಆಶ್ರಯದಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮದ ಉದ್ಘಾಟನೆಯು ವೇಣೂರು ಗ್ರಾ.ಪಂ. ವಠಾರದಲ್ಲಿ ಅ. 13ರಂದು ಜರುಗಿತು.

ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ| ಮಂಜು ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೇಬಿಸ್ ಎನ್ನುವುದು ಭಯಾನಕ ಖಾಯಿಲೆ ಆಗಿದ್ದು, ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದನ್ನು ನೀಡಬೇಕು ಎಂದರು.

ಹಿರಿಯ ಪಶು ವೈದ್ಯಾಧಿಕಾರಿ ಡಾ| ವಿನಯ ಕುಮಾರ್ ಎಸ್.ಎಂ., ಫಲ್ಗುಣಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಿ.ಎಸ್. ಜಯರಾಜ್, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ, ಪಶು ಸಂಗೋಪನ ಇಲಾಖೆಯ ಅಧಿಕಾರಿಗಳಾದ ಸುಕೀರ್ತಿ ಜೈನ್, ಸದಾಶಿವ ಭಟ್, ರಮೇಶ್, ಸಚಿನ್, ಪಂ. ಸದಸ್ಯರಾದ ಹರೀಶ್ ಪಿ.ಎಸ್., ಸಂಭಾಷಿಣಿ, ಜಿನ್ನು ಮತ್ತಿತರರು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ. ಸಭೆಯನ್ನು ನಿರ್ವಹಿಸಿದರು.

 

 

 

LEAVE A REPLY

Please enter your comment!
Please enter your name here