ವೇಣೂರು ಜೈನ್ ಮಿಲನ್ ಪದಗ್ರಹಣ ಸಮಾರಂಭ: ಕ್ರಿಯಾತ್ಮಕ ಚಟುವಟಿಕೆಗಳಿಂದ ಜನಮನ್ನಣೆ: ಪುಷ್ಪರಾಜ ಶೆಟ್ಟಿ

0


ವೇಣೂರು: ಭಾರತೀಯ ಜೈನ್ ಮಿಲನ್ ವೇಣೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಿತು.

ಜೈನ್ ಮಿಲನ್‌ನ ವಲಯ 8ರ ಅಧ್ಯಕ್ಷ, ಮಂಗಳೂರು ಅಭೀಷ್ ಬಿಲ್ಡರ್‍ಸ್‌ನ ಸಂಸ್ಥಾಪಕ ಪುಷ್ಪರಾಜ ಜೈನ್ ಮಾತನಾಡಿ, ಜೈನ್ ಮಿಲನ್‌ಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತರವಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದರು.

ವಲಯ 8ರ ಉಪಾಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ, ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಿರ್ದೇಶಕ ಜಯರಾಜ್ ಕಂಬಳಿ ಉಪಸ್ಥಿತರಿದ್ದರು. ವೇಣೂರು ಜೈನ್ ಮಿಲನ್ ನಿರ್ಗಮನ ಅಧ್ಯಕ್ಷೆ ಸರೋಜಾ ಜಿ. ಜೈನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆಯರಾದ ಸುನಿತಾ ಬಳ್ಳಾಲ್, ವಾಣಿಶ್ರೀ ವೃಷಭರಾಜ್ ಅನಿಸಿಕೆ ವ್ಯಕ್ತಪಡಿಸಿದರು. ನಿರ್ದೇಶಕ ಬಿ. ಪ್ರಮೋದ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.


ಸಮ್ಮಾನ-ಗೌರವಾರ್ಪಣೆ:

ವೇಣೂರು ಜೈನ್ ಮಿಲನ್ ಅಧ್ಯಕ್ಷೆ ಸರೋಜಾ ಜಿ. ಜೈನ್, ಸಮಿತಿಯ ಮಾಜಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಜತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ, ಬಾಹುಬಲಿ ಕ್ಷೇತ್ರದ ಮೆನೇಜರ್ ವೈ. ಜಯರಾಜ್ ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಗೌರವ ಸದಸ್ಯರಾಗಿ ಆಯ್ಕೆಯಾದ ಪ್ರವೀಣ್‌ಕುಮಾರ್ ಇಂದ್ರ, ಜಿಲ್ಲಾ ಜೈನ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಸೋಮಶೇಖರ ಶೆಟ್ಟಿಯವರನ್ನು ಅಭಿನಂದಿಸಲಾಯಿತು.

ಸರ್ವಾರ್ಥ್ ಜೈನ್ ಪ್ರಾರ್ಥಿಸಿ, ನೂತನ ಅಧ್ಯಕ್ಷ ಸುಕುಮಾರ್ ಜೈನ್ ಕೆಳಗಿನಗುತ್ತು ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಜ್ಯೋತ್ಸಾ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಬಿ. ನಿರ್ಮಲ್ ಕುಮಾರ್ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here