ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅಶ್ವಥ್ ಕುಮಾರ್ ಕಾರ್ಯದರ್ಶಿಯಾಗಿ ಸುನೀಲ್ ಕನ್ಯಾಡಿ

0

ಬೆಳ್ತಂಗಡಿ : ಯುವವಾಹಿನಿ( ರಿ ) ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾ ಅಶ್ವಥ್ ಕುಮಾರ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.

ಗುರುವಾಯನಕೆರೆಯಲ್ಲಿ ಅ.13 ರಂದು ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಇವರು ಆಯ್ಕೆಯಾದರು.

ಯುವವಾಹಿನಿಯ ಗೌರವ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಲವಾರು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಸುನೀಲ್ ಕನ್ಯಾಡಿ , ಕೋ ಶಾಧಿಕಾರಿಯಾಗಿ ವಿಜಯ್ ಕುಮಾರ್ ಶಿರ್ಲಾಲು  ಆಯ್ಕೆಯಾದರು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ರಮಾನಂದ ಸಾಲಿಯಾನ್ ಮುಂಡೂರು ಉಪಸ್ಥಿತರಿದ್ದರು ಮಾಜಿ ಅಧ್ಯಕ್ಷ ಎಂ. ಕೆ. ಪ್ರಸಾದ್ ಶಿರ್ಲಾಲ್ ಚುನಾವಣಾ ಅಧಿಕಾರಿಯಾಗಿ ಪ್ರಕೃಯೆ ನಡೆಸಿದರು ಇತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಸಂತೋಷ ಅರಳಿ ವರದಿ ವಾಚಿಸಿದರು.

LEAVE A REPLY

Please enter your comment!
Please enter your name here