ಬೆಳ್ತಂಗಡಿ ಅ.13 : ಅಂಗನವಾಡಿ ನೌಕರರಿಗೆ ಗ್ರಾಚ್ಯುವಿಟಿ ,ಸುಪ್ರೀಂ ಕೋರ್ಟು ಆದೇಶದಂತೆ ಸಂಘದ ನೇತೃತ್ವದಲ್ಲಿ ಗ್ರಾಚ್ಯುವಿಟಿ ಅರ್ಜಿ ಸಲ್ಲಿಕೆ

0

ಬೆಳ್ತಂಗಡಿ: ಅಂಗನವಾಡಿ ನೌಕರರ ದುಡಿಮೆಯನ್ನು ಮತ್ತು ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಸುಪ್ರೀಂಕೋರ್ಟು  ಏ.25,  2022 ರಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕಾಯ್ದೆ ಅನ್ವಯ ಆಗುತ್ತದೆ ಗ್ರಾಚ್ಯವಿಟಿ ನಿಯಮ ಪ್ರಕಾರ ಸೇವೆಲ್ಲಿಸಿದ ಎಲ್ಲಾ ಅಂಗನವಾಡಿ ನೌಕರರಿಗೆ ಗ್ರಾಚ್ಯವಿಟಿ ನೀಡಬೇಕೆಂದು ತೀರ್ಪು ನೀಡಿರುವುದು ಅಂಗನವಾಡಿ ನೌಕರರಿಗೆ ದೊರೆತ ಬಲು ದೊಡ್ಡ ಗೆಲುವು ಎಂದು ಬಿ.ಎಂ.ಭಟ್ ಹೇಳಿದರು.

ಇಂದು ನಿವೃತ್ತ ಅಂಗನವಾಡಿ ನೌಕರರ ಗ್ರಾಚ್ಯುವಿಟಿ ಅರ್ಜಿ ಸ್ವೀಕರಿಸುತ್ತಿಲ್ಲವೆಂದು, ಅರ್ಜಿ ಸ್ವೀಕರಿಸಲು ಆದೇಶ ಬಂದಿಲ್ಲವೆಂದು ಹೇಳಿದ್ದರಿಂದ ಇಪ್ಪತ್ತು ಇಪ್ಪತ್ತೈದು ನಿವೃತ್ತ ಅಂಗನವಾಡಿ ನೌಕರರು ಒಟ್ಟಾಗಿ ಸೇರಿ ಸಂಘದ ನೇತೃತ್ವದಲ್ಲಿ ಗ್ರಾಚ್ಯುವಿಟಿ ಅರ್ಜಿ ಸಲ್ಲಿಸಲು ಹೋದಾಗ ಬಿ.ಎಂ.ಭಟ್ ಈ ವಿಚಾರ ತಿಳಿಸಿದರು.

ಈ ಸಂದರ್ಭದಲ್ಲಿ ಅರ್ಜಿ ಸ್ವೀಕರಿಸಲು ಒಪ್ಪಿದ ಸಿಡಿಪಿಓ ಅವರನ್ನು ಅಭಿನಂದಿಸಿದ ಅವರು ತಾಲೂಕಿನ ಎಲ್ಲಾ ನಿವೃತ್ತ ಅಂಗನವಾಡಿ ನೌಕರರು ಅರ್ಜಿ ಸಲ್ಲಿಸಿ ತಮ್ಮ ಕಾನೂನು ಬದ್ದ ಹಕ್ಕಿನ ಸವಲತ್ತು ಪಡಕೊಳ್ಳಬೇಕು’ ಎಂದು ಕರೆ ನೀಡಿದ ಅವರು ಸಂಘದ ಸದಸ್ಯರಿಗೆ ಉಚಿತವಾಗಿ ಅರ್ಜಿ ಸಲ್ಲಿಸಿ ಗ್ರಾಚ್ಯುವಿಟಿ ತೆಗೆಸಿಕೊಡಲಾಗುವುದು ಎಂದರು.

ಗ್ರಾಚ್ಯುವಿಟಿ ಕಾಯ್ದೆ ಪ್ರಕಾರ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಪ್ರತಿಯೊಬ್ಬ ದುಡಿಮೆಗಾರನಿಗೆ ಕೆಲಸ ಬಿಟ್ಟ ಮೇಲೆ ದುಡಿಸಿದಾತನಿಂದ ಸಿಗಬೇಕಾದ ಕಾನೂನು ಬದ್ದ ಹಕ್ಕಾಗಿದೆ ಎಂದವರು ವಿವರಿಸಿದರು. 2011 ರಲ್ಲಿ ನಮ್ಮ ಸಂಘದ ಮೂಲಕ ದಾಖಲಾದ ವ್ಯಾಜ್ಯ ಗುಜರಾತ್ ಹೈಕೋರ್ಟು ತರುವಾಯ ಸುಪ್ರೀಂ ಕೋರ್ಟು ತನಕ ಹೋಗಬೇಕಾಯ್ತು ಎಂದ ಅವರು ನಾವು ಮತ ನೀಡಿ ಅಧಿಕಾರ ಪಡೆದ ಶಾಸಕರ, ಎಂ.ಪಿ.ಗಳಿಗೆ ಇಲ್ಲದ ಕಾಳಜಿ ನ್ಯಾಯಾಲಯಕ್ಕೆ ಇದೆ ಎಂಬುದು ಇದರಿಂದ ಸಾಬಿತಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಮುಖಂಡರುಗಳಾಗಿದ್ದ ಎಮ್ಮಿ ಫೆರ್ನಾಂಡೀಸ್, ಮುತ್ತಮ್ಮ, ಜಾನಕಿ ಮುಖಂಡರುಗಳಾದ ಜಯರಾಮ ಮಯ್ಯ, ಈಶ್ವರಿ, ಭವ್ಯ, ಅಶ್ವಿತ, ಕುಂಡದಬೆಟ್ಟು, ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ರಾಮಚಂದ್ರ, ಲಾರೆನ್ಸ್, ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here