ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ‘ ಶೋಧ ‘ ರಾಜ್ಯ ಮಟ್ಟದ ವಿಜ್ಞಾನ – ಕಲಾ ಸ್ಪರ್ಧೆಗಳ ಆಮಂತ್ರಣ ಅನಾವರಣ

0

ಗುರುವಾಯನಕೆರೆ:  ಅ. 29 ರಂದು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ‘ ಶೋಧ ‘ ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ – ಕಲಾ ಸ್ಪರ್ಧೆಗಳ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಶಿರ್ಲಾಲು ಹಾಗೂ ವಿಜಯವಾಣಿ ಪತ್ರಿಕೆಯ ಮುಖ್ಯ ವರದಿಗಾರರಾದ ಮನೋಹರ್ ಬಳಂಜ ಅವರು ಅನಾವರಣಗೊಳಿಸಿದರು.


ರಾಜ್ಯ ಮಟ್ಟದ ವಿಜ್ಞಾನ – ಕಲಾ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ ನಡೆಯಲಿ’ ಎಂದು ಗಣೇಶ್ ಶಿರ್ಲಾಲು ಅವರು ಶುಭ ಹಾರೈಸಿದರು.

ಸುಮಂತ್ ಕುಮಾರ್ ಅವರ ಕನಸಿನ ಕೂಸು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಕೇವಲ ವಿಜ್ಞಾನ ಕ್ಷೇತ್ರ ಮಾತ್ರವಲ್ಲ, ಕಲೆ,ಸಾಹಿತ್ಯ ,ಸಂಸ್ಕೃತಿ ಮೊದಲಾಗಿ ಎಲ್ಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ವಿಶಾಲ ದೃಷ್ಟಿಕೋನ ಇಟ್ಟು ಕೊಂಡಿದೆ. ಇದು ಅನುಕರಣೀಯ ವಿಚಾರ ‘ ಎಂದು ಮನೋಹರ್ ಬಳಂಜ ಹೇಳಿದರು.

ಎಕ್ಸೆಲ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶೋಧದ ಯಶಸ್ಸಿಗೆ ಬೆಂಬಲ ಕೋರಿದರು. ಸಹನಾ, ಡಾ. ನವೀನ್ ಕುಮಾರ್ ಮರಿಕೆ, ಮೊಹಮ್ಮದ್ ಯೂನಸ್ ಆಲಿ ಬಾಯಿ, ವಿಕಾಸ್ ಹೆಬ್ಬಾರ್, ಜಯರಾಂ, ಅಂಬಿಕಾ, ಶಾಂತಿಪ್ರಿಯ ಉಪಸ್ಥಿತರಿದ್ದರು. ಪುರುಷೋತ್ತಮ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here