ಡಾ|| ಡಿ ವೀರೇಂದ್ರ ಹೆಗ್ಗಡೆಯವರ 55ನೇ ವರ್ಷದ ಪಟ್ಟಾಭಿಷೇಕದ ಅಂಗವಾಗಿ ಶ್ರೀ ಕ್ಷೇತ್ರದ ವಾಹನ ಚಾಲಕ ಮಾಲಕರ ಸಭೆ: ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಚಾಲಕ ಯೋಗೀಶ್ ರವರಿಗೆ ಚಿಕಿತ್ಸಾ ನೆರವು

0

ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ 55ನೇ ವರ್ಷದ ಪಟ್ಟಾಭಿಷೇಕದ ಅಂಗವಾಗಿ ಶ್ರೀ ಕ್ಷೇತ್ರದ ವಾಹನ ಚಾಲಕ ಮಾಲಕರ ಸಭೆಯನ್ನು ಅ.14ರಂದು ನಡೆಯಿತು.

ಈ ಸಂದರ್ಭದಲ್ಲಿ ಚಾಲಕರಲ್ಲಿ ಒಬ್ಬರಾದ ಯೋಗೀಶ್ ಆಚಾರ್ಯ ಧರ್ಮಸ್ಥಳ ಇವರು ಸುಮಾರು ದಿನಗಳಿಂದ ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಇವರಿಗೆ ಮಾಹಿತಿ ಕಚೇರಿ ವ್ಯವಸ್ಥಾಪಕರಾದ ಯೋಗೀಶ್, ಮೋಹನ್, ವಿಜಯರ ಉಪಸ್ಥಿತಿಯಲ್ಲಿ ಸಭೆಗೆ ಸೇರಿದ ಮಂದಿ ಧನಸಹಾಯವನ್ನು ಮಾಡಿದರು.

ಒಟ್ಟು 10,750 ರೂ ಯನ್ನು ಯೋಗೀಶ್ ಆಚಾರ್ಯ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಸಂಗ್ರಹವಾದ ಹಣವನ್ನು ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here